ಕ್ಯಾಟ್ ಫಿಶ್ ಹೊಂಡಗಳ ಮೇಲೆ ದಾಳಿ

ಕ್ಯಾಟ್ ಫಿಶ್ ಹೊಂಡಗಳ ಮೇಲೆ ದಾಳಿ

ಹೊಸಕೋಟೆ, ಡಿ. 18: ಬೆಳ್ಳಂಬೆಳಗ್ಗೆ ಅಕ್ರಮ ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವಿಗೆ ಮುಂದಾದ ಅಧಿಕಾರಿಗಳ ತಂಡ. ಹೊಸಕೋಟೆ ತಾಲೂಕಿನ ಬೈಲುನರಸಾಪುರ ಹಾಗೂ ಎನ್. ಹೊಸಹಳ್ಳಿ ಗ್ರಾಮಗಳಲ್ಲಿ ಸದ್ದು ಮಾಡುತ್ತಿರುವ ಜೆಸಿಬಿ ಯಂತ್ರಗಳು. ಹೊಸಕೋಟೆ ತಾಲೂಕಿನ ತಹಸೀಲ್ದಾರ್, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ನಂದಗುಡಿ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡದಿಂದ ಕ್ಯಾಟ್ ಫಿಶ್ ಹೊಂಡಗಳ ಮೇಲೆ ದಾಳಿ. ಈಗಾಗಲೇ ಎರಡು ತಂಡಗಳಾಗಿ ವಿಂಗಡಿಸಿ 2 ಜೆಸಿಬಿ ಯಂತ್ರಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಹಿಂದೆ ಜಿಲ್ಲಾ ಎಸ್.ಪಿ. ರವಿ ಚೆನ್ನಣ್ಣನವರ್ ಅವರ ನೇತೃತ್ವದಲ್ಲಿ ಸಹ ತೆರವುಗೊಳಿಸಿದ್ದು, ಈಗ ಮತ್ತೆ ಪ್ರಾರಂಭಿಸಿದ್ದ ಮೀನು ಸಾಕಾಣಿಕೆ ಮೇಲೆ ದಾಳಿ ನಡೆಸುತ್ತಿದ್ದಾರೆ. ದಿನ ಪೂರ್ತಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎರಡೂ ಗ್ರಾಮಗಳಲ್ಲಿ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos