ಹುಟ್ಟುಹಬ್ಬದ ಸಂಭ್ರಮದಲ್ಲಿ ತುಳಸಿರಾಮ್ ರಾಜ್

ಹುಟ್ಟುಹಬ್ಬದ ಸಂಭ್ರಮದಲ್ಲಿ ತುಳಸಿರಾಮ್ ರಾಜ್

ಬೆಂಗಳೂರು,  ಫೆ. 06: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಬರ ಹಾವಳಿ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಬೆಳವಣಿಗೆ ಹೆಚ್ಚಾಗುತ್ತಿದೆ.

ಹೌದು, ನಟನೆ ಹಾಗೂ ಚಿತ್ರ ನಿರ್ದೇಶಕ ನಿರ್ಮಾಪಕ ಹೀಗೆ ಹಲವಾರು ರೀತಿಯ ಕಲೆಗಳಲ್ಲಿ ಹೊಸಬರು ತಮ್ಮ ಕಲೆಗಳನ್ನು ಪರಿಚಯಿಸುತ್ತಿದ್ದಾರೆ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ತುಳಸಿರಾಮ್ ರಾಜ್  ಕೂಡ ಒಬ್ಬರಾಗಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, ಇವರು ತಮ್ಮ ಜೀವನವನ್ನೇ ಸಿನಿಮಾರಂಗಕ್ಕೆ ಅರ್ಪಿಸುತ್ತಿದ್ದಾರೆ. ಹಾಗೆಯೇ ಇವರು ಪಬ್ಲಿಸಿಟಿ ಡಿಸೈನರ್ ಆಗಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ತುಳಸಿರಾಮ್ ರಾಜ್ ಕನ್ನಡ ಚಿತ್ರರಂಗದಲ್ಲಿ ಯಾರ ಸಹಾಯವಿಲ್ಲದೆ ತಮ್ಮದೇ ಆದ ಒಂದು ಸಂಸ್ಥೆಯನ್ನು ಕಟ್ಟಿಕೊಂಡು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ತುಳಸಿ ರಾಮ್ ರಾಜ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರಿಗೆ ತಮ್ಮ ಸಂಸ್ಥೆಯಿಂದ ಹಾಗೂ ಸಿನಿಮಾರಂಗದಿಂದ ಹಲವಾರು ಅಭಿಮಾನಿಗಳು ಇವರಿಗೆ ಶುಭಕೋರಿದ್ದಾರೆ.

ಸುಮಾರು 100 ಸಿನಿಮಾಗಳಲ್ಲಿ ಪಬ್ಲಿಸಿಟಿ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಕೆಲವು ದಿನಗಳ ನಂತರ, ಫಸ್ಟ್ ರಾಂಕ್ ರಾಜು, ಉಡುಂಬ, ಬೆಂಕಿಯಲ್ಲಿ ಅರಳಿದ ಹೂವು, ಲವ್ ಮ್ಯಾಟರ್, ಪುಟಾಣಿ ಪವರು, ಹೀಗೆ ಹಲವಾರು ಚಿತ್ರಗಳಲ್ಲಿ ಪಬ್ಲಿಸಿಟಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನೂ 2 ಸಿನಿಮಾಗಳಲ್ಲಿ ಎಡಿಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಹಾಗೂ ಒಂದು ಸಿನಿಮಾದಲ್ಲಿ ಡೈರೆಕ್ಟರ್ ಆಗಿಯು ಸಹ ಕೆಲಸ ಮಾಡುತ್ತಿದ್ದಾರೆ.

ಈ ಚಿಕ್ಕ ವಯಸ್ಸಿನಲ್ಲಿ ಸಿನಿಮಾರಂಗದಲ್ಲಿ ಇಷ್ಟೊಂದು ಸಾಧನೆ ಮಾಡುತ್ತಿರುವ ತುಳಸಿರಾಮ್ ರಾಜ್ ಅವರಿಗೆ ನಮ್ಮ ಕಡೆಯಿಂದ ಹಾಗೂ ಚಿತ್ರರಂಗದ ಕಡೆಯಿಂದ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದೇವೆ. ಭಗವಂತ ಇವರಿಗೆ ಯಶಸ್ಸು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ.

ಫ್ರೆಶ್ ನ್ಯೂಸ್

Latest Posts

Featured Videos