ಏಷ್ಯಾಕಪ್ ತಂಡಕ್ಕೆ ಕನ್ನಡಿಗ KL ರಾಹುಲ್ ಆಗಮ

ಏಷ್ಯಾಕಪ್ ತಂಡಕ್ಕೆ ಕನ್ನಡಿಗ KL ರಾಹುಲ್ ಆಗಮ

2023ರ ಏಷ್ಯಾ ಕಪ್ ಟೂರ್ನಿ ಈಗಾಗಲೇ ಪ್ರಾರಂಭವಾಗಿದೆ ಭಾರತ ಈಗಾಗಲೇ ಎರಡು ಪಂದ್ಯವನ್ನು ಆಡಿ ಗೆದ್ದಿದೆ. ಭಾರತ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಲಭ್ಯರಾಗಿರುವುದರಿಂದ ಇದು ಭಾರತ ತಂಡಕ್ಕೆ ಸ್ವಲ್ಪ ಮಟ್ಟದ ತೊಂದರೆಯಾಗಿತ್ತು. ಅದರೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ಮೀಸಲು ವಿಕೆಟ್‌ಕೀಪರ್- ಬ್ಯಾಟರ್ ಆಗಿ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಳ್ಳುವ ತವಕದಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ಅಭ್ಯಾಸದ ಸಮಯದಲ್ಲಿ ಕೊಂಚ ತೊಂದರೆಗೀಡಾದವರಂತೆ ಕಂಡುಬಂದಿದ್ದರಿಂದ ಅವರನ್ನು ಏಷ್ಯಾಕಪ್‌ನ ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಿರಲಿಲ್ಲ. ಹೀಗಾಗಿ ರಾಹುಲ್ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್‌ರನ್ನು ತಂಡದ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದರೀಗ ರಾಹುಲ್ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಂಡಿರುವುದರಿಂದ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅವರೀಗ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ವರದಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos