ಸೋನು ಶ್ರೀನಿವಾಸ್ ಗೌಡ ಅರೆಸ್ಟ್!

ಸೋನು ಶ್ರೀನಿವಾಸ್ ಗೌಡ ಅರೆಸ್ಟ್!

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆಯದೆ ಅಕ್ರಮವಾಗಿ ದತ್ತು ಪಡೆದಿದ್ದೇ ಅವರ ಬಂಧನಕ್ಕೆ ಕಾರಣ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ.ಗೀತಾ.ಜೆ ಎಂಬವರು ದೂರು ನೀಡಿದ್ದರು.

ಮಾರ್ಚ್ 2ರಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಾಯಚೂರು ಮೂಲದ ಹೆಣ್ಣು ಮಗುವೊಂದನ್ನು ಪೋಷಕರ ಸಮ್ಮುಖದಲ್ಲಿ ದತ್ತು ಪಡೆದಿರುವುದಾಗಿ ಸೋನು ಗೌಡ ಹೇಳಿಕೊಂಡಿದ್ದರು. ಆದರೆ ಹಿಂದೂ ದತ್ತು ಕಾಯ್ದೆಯನ್ವಯ ದತ್ತು ಪಡೆಯುವ ವ್ಯಕ್ತಿ ಮತ್ತು ಪಡೆಯಲ್ಪಡುವ ಮಗುವಿನ ನಡುವೆ ಕನಿಷ್ಠ 25 ವರ್ಷ ಅಂತರವಿರಬೇಕು. ದತ್ತು ಪಡೆಯುವ ವ್ಯಕ್ತಿ ತನ್ನ ಅರ್ಹತೆಯ ಕುರಿತು ಕೇಂದ್ರ ಹಾಗೂ ರಾಜ್ಯ ದತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ದತ್ತು ಸ್ವೀಕರಿಸಬೇಕು.

ಅಲ್ಲದೇ ಮಗುವಿನ ಪೋಷಕರು ಹಾಗೂ ಮಗುವಿಗೆ ವಿವಿಧ ಸೌಕರ್ಯಗಳನ್ನು ನೀಡಿರುವುದಾಗಿ ಸೋನು ಗೌಡ ಹೇಳಿಕೊಂಡಿರುವುದು, ಮೇಲ್ನೋಟಕ್ಕೆ ಇದು ಮಾರಾಟ ಪ್ರಕ್ರಿಯೆಯಂತೆ ತೋರುತ್ತಿದೆ. ಮಗುವಿನ ಆತ್ಮಾಭಿಮಾನಕ್ಕೆ ಧಕ್ಕೆ ತರುವಂಥದ್ದಾಗಿರುತ್ತದೆ. ಮಗು 1 ಅಥವಾ 2ನೇ ತರಗತಿಯ ಶಿಕ್ಷಣಕ್ಕೆ ಅರ್ಹವಾಗಿರುವಂತೆ ತೋರುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ಶಾಲೆಗೆ ಕಳುಹಿಸಿರುವುದಿಲ್ಲ. ಹಾಗಾಗಿ ಸೋನು ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿತ್ತು.

ಮಗುವನ್ನು ತಮ್ಮ ವಶಕ್ಕೆ ಪಡೆದುಕೊಂಡು ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಸೋನು ಗೌಡರಿಂದ ವಿವರಣೆ ಕೋರಿ ನೋಟಿಸ್ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos