ಹಸುಗಳಿಗೂ ರಕ್ಷಾಕವಚ..!

ಹಸುಗಳಿಗೂ ರಕ್ಷಾಕವಚ..!

ಅಯೋಧ್ಯೆ(ಉತ್ತರಪ್ರದೇಶ), ನ. 25 : ದೇಶದಲ್ಲಿ ಚಳಿಗಾಲ ಜೋರು. ಚಳಿಗೆ ಪ್ರಾಣಿಗಳೂ ಒದ್ದಾಡುತ್ತಿವೆ. ಮಾನವ ಅದರಿಂದ ಪಾರಾಗಲು ವಿಶೇಷ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳುವುದು ಸಹಜ. ಅಯೋಧ್ಯೆ ನಗರ ಪಾಲಿಕೆ ತನ್ನ ಮಾನ ವೀಯ ಭಾವವನ್ನು ಇನ್ನಷ್ಟು ವಿಸ್ತರಿಸಿದೆ. ಚಳಿಯಿಂದ ಒದ್ದಾಡುತ್ತಿರುವ ಅಲ್ಲಿನ ಗೋ ಸಂಪತ್ತನ್ನು ರಕ್ಷಿಸಲು ಮುಂದಾಗಿದೆ. ಎತ್ತುಗಳು, ಗೋವುಗಳಿಗೆಂದು ವಿಶೇಷವಾದ, ಬೆಚ್ಚನೆಯ ಸೆಣಬಿನ ರಕ್ಷಾ ಕವಚ (ಕೋಟ್) ಹೊಲಿಯಲು ಆದೇಶ ನೀಡಿದೆ!
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಗೋಶಾಲೆಗಳಲ್ಲಿ ಇರುವ ಸಾವಿರಾರು ಎತ್ತು, ಹಸುಗಳು ಇದರ ಪ್ರಯೋಜನ ಪಡೆಯಲಿವೆ. ಆರಂಭದಲ್ಲಿ ಬೈಶಿಂಗ್ಪುರದಲ್ಲಿರುವ 1,200 (700 ಎತ್ತುಗಳನ್ನು ಸೇರಿ) ಗೋವುಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಈಗಾಗಲೇ 100 ಕರುಗಳಿಗೆ ದಿರಿಸು ನೀಡಲು ಸೂಚಿಸಲಾಗಿದೆ. ಮಾಸಾಂತ್ಯಕ್ಕೆ ಅದು ಅಧಿಕಾರಿಗಳ ಕೈಸೇರಲಿದೆ. ಮುಂದಿನ ದಿನಗಳಲ್ಲಿ ಇಡೀ ನಗರದ ಗೋವುಗಳು ಈ ಯೋಜನೆಯ ಲಾಭ ಪಡೆಯಲಿವೆ ಎಂದು ನಗರದ ನಿಗಮದ ಆಯುಕ್ತ ನೀರಜ್ ಶುಕ್ಲಾ ತಿಳಿಸಿದ್ದಾರೆ.
ರಕ್ಷಾ ಕವಚ?
ರಕ್ಷಾಕವಚ ಸೆಣಬಿನಿಂದ ತಯಾರಿಸಲಾಗುತ್ತದೆ. ಕರುವಿಗೆ ಮೂರು ಸ್ತರದಲ್ಲಿ ಇದನ್ನು ಹೊಲಿಯ ಲಾಗುತ್ತದೆ. ಇದರಲ್ಲಿ ಮೃದುವಾದ ಬಟ್ಟೆಯೂ ಸೇರಿರುತ್ತದೆ. ಹಸುವಿಗೆ ಎರಡು ಸ್ತರದಲ್ಲಿ ಹೊಲಿಗೆ ಮಾಡ ಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos