ಅರ್ಜುನ ಹುತಾತ್ಮ ಪ್ರಕರಣ ಆರಂಭಿದ ತನಿಖಾ ತಂಡ!!

ಅರ್ಜುನ ಹುತಾತ್ಮ ಪ್ರಕರಣ ಆರಂಭಿದ ತನಿಖಾ ತಂಡ!!

ಹಾಸನ: ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರಂತ ಅಂತ್ಯ ಕಂಡಿತ್ತು. ಪರಿವರ್ತನೆ ಎನ್ನುವುದು ಬರೀ ಮನುಷ್ಯನಿಗೆ ಮಾತ್ರವಲ್ಲ, ಅದು ಆನೆಗಳಿಗೂ ಸಾಧ್ಯ ಎನ್ನುವುದನ್ನು ಸಾಧಿಸಿತ್ತು. ವಿಶ್ವವಿಖ್ಯಾತ ಮೈಸೂರು ದಸರೆಗೆ ಆನೆಯನ್ನು ಸಿದ್ದಪಡಿಸುತ್ತಿದ್ದರು. ಆದರೆ ಅರ್ಜುನನಿಗೆ ತಯಾರು ಮಾಡುವ ಅವಶ್ಯಕತೆಯೇ ಇರಲಿಲ್ಲ. ದಸರೆಯಲ್ಲಿ ಭಾಗವಹಿಸುವ ಎಲ್ಲಾ ಕಳೆ ಅರ್ಜುನ ಆನೆಯಲ್ಲಿತ್ತು.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಅರ್ಜುನ ಹುತಾತ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಿಂದ ಆಗಮಿಸಿದ ತನಿಖಾತಂಡ ತನಿಖೆ ಆರಂಭಿಸಿದೆ. ಮೊದಲು ತನಿಖಾಧಿಕಾರಿಗಳು ಅರ್ಜುನ ಹುತಾತ್ಮನಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದಸರಾ ಆನೆ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ವನ್ಯಪಾಲಕರಾದ ಅಜಯ್ ಮಿಶ್ರ ತಂಡದಿಂದ ತನಿಖೆ ಶುರುವಾಗಿದೆ. ಅರ್ಜುನ ಕಾಲಿಗೆ ಗುಂಡೇಟು ಬಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಾವುತ ಹಾಗೂ ಜನರು ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆಯ ಕಾಲಿಗೆ ಗುಂಡೇಟು ಬಿದ್ದು ಹುತಾತ್ಮನಾಗಿದ್ದ. ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶಿಸಿದ್ದರು. ಅದರಂತೆ ತನಿಖಾಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos