ಪ್ರಾಣ ಬೆದರಿಕೆ ರಕ್ಷಣೆಗೆ ಗೃಹ ಸಚಿವರಿಗೆ ಮನವಿ

ಪ್ರಾಣ ಬೆದರಿಕೆ ರಕ್ಷಣೆಗೆ ಗೃಹ ಸಚಿವರಿಗೆ ಮನವಿ

ಮಾಲೂರು: ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಯನ್ನು ನಿಲ್ಲಿಸುವಂತೆ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರುಗೆ ಪ್ರಾಣ ಬೆದರಿಕೆ ಹಾಕುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮತ್ತು ರಾಘವೇಂದ್ರ ಹುಣಸೂರುರವರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಿಂಹ ಸೇನೆ ಹಾಗೂ ಪ್ರಜಾ ವಿಮೋಚನಾ ಚಳುವಳಿ ವತಿಯಿಂದ ರಾಜ್ಯ ಗೃಹ ಸಚಿವರಿಗೆ ಮಾಲೂರು ಸಿಪಿಐ ಕೆ.ನಾಗರಾಜ್ ಮುಖಾಂತರ ಮನವಿ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಿಂಹ ಸೇನೆಯ ರಾಜ್ಯ ಯುವ ಘಟಕ ಅಧ್ಯಕ್ಷ ಮಾರಸಂದ್ರ ಮಂಜುನಾಥ್ ಮಾತನಾಡಿ, ಜುಲೈ ೪ ರಿಂದ ಜೀ-ಕನ್ನಡ ವಾಹಿನಿಯಲ್ಲಿ ಭಾರತ ಸಂವಿಧಾನ ರೂಪಿಸಿದ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮತ್ತು ನವ ಭಾರತದ ನಿರ್ಮಾತೃ, ದಲಿತರ ಆಶಾಕಿರಣರಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಗಾಥೆಯನ್ನು ಮನೆ ಮನೆಗೆ ಸಾರುವ ನಿಟ್ಟಿನಲ್ಲಿ ಮಹಾನಾಯಕ ಎಂಬ ಧಾರವಾಹಿಯ ಮುಖಾಂತರ ಪ್ರಸಾರ ಮಾಡುತ್ತಿದ್ದು, ಮಹಾನಾಯಕ ದಾರವಾಹಿನಿಯು ಈಗಾಗಲೇ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಇದನ್ನು ಸಹಿಸದ ಕೆಲವು ಮಂದಿ ಕಿಡಿಗೇಡಿಗಳು ಜೀ-ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ರವರಿಗೆ ದೂರವಾಣಿ ಕರೆಗಳ ಮುಖಾಂತರ ಪ್ರಾಣ ಬೆದರಿಕೆ ಒಡ್ಡಿರುತ್ತಾರೆ.

ಈ ವಿಚಾರವಾಗಿ ನಮ್ಮ ಸಂಘಟನೆಗಳು ಪ್ರಾಣ ಬೆದರಿಕೆ ಒಡ್ಡಿರುವ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು, ಮತ್ತು ರಾಘವೇಂದ್ರ ಹುಣಸೂರು ರವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ತಮ್ಮಲ್ಲಿ ಒತ್ತಾಯಿಸುತ್ತೇವೆ. ಮತ್ತು ಈ ರೀತಿಯ ಘಟನೆಗಳು ಮರುಕಳಿಸಬಾರದೆಂದು ಈ ಬೆದರಿಕೆ ಹಾಕುತ್ತಿರುವ ಆಸಾಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಕರ್ನಾಟಕ ದಲಿತ ಸಿಂಹ ಸೇನೆ ಮತ್ತು ಪ್ರಜಾ ವಿಮೋಚನಾ ಚಳುವಳಿ ವತಿಯಿಂದ ಒತ್ತಾಯಿಸುತ್ತೀದ್ದೇವೆ ಎಂದರು

 

ಫ್ರೆಶ್ ನ್ಯೂಸ್

Latest Posts

Featured Videos