ಮಹಿಳಾ ರಾಜ್ಯಾಧ್ಯಕ್ಷರಾಗಿ ಅನುರೆಡ್ಡಿ ಆಯ್ಕೆ !

ಮಹಿಳಾ ರಾಜ್ಯಾಧ್ಯಕ್ಷರಾಗಿ ಅನುರೆಡ್ಡಿ ಆಯ್ಕೆ !

ಹೊಸಕೋಟೆ: ನೂತನವಾಗಿ ಆಯ್ಕೆಯಾಗಿರುವ ಅನುರೆಡ್ಡಿ ಅವರು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಕರ‍್ಯಗಳನ್ನು ಮಾಡಿಕೊಂಡು ಸಂಘಟನೆ ಮಾಡುವ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡ ಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮಹಿಳಾ ರಾಜ್ಯಾಧ್ಯಕ್ಷರನ್ನಾಗಿ ಹೊಸಕೋಟೆ ತಾಲೂಕಿನ ದೊಡ್ಡದುನ್ನಸಂದ್ರ ಗ್ರಾಮದ ಅನುಸೂಯ (ಅನುರೆಡ್ಡಿ) ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಣೆ ಮಾಡಿ ನಂತರ ಮಾತನಾಡಿದ ಅವರು,
ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ದೌರ್ಜನಕ್ಕೊಳಗಾದ ಮಹಿಳೆಯರಿಗೆ ಸಾಮಾಜಿಕ ಭದ್ರತೆ ಹೊದಗಿಸುವುದು ಮತ್ತು ದುರ್ಬಲ ಮಹಿಳೆಯರಿಗಾಗಿ ಸೌಲಭ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರ್ಥಿಕವಾಗಿ ಮುಂದುವರಿಯಲು ಅರಿವು ಮೂಡಿಸಬೇಕು. ಪ್ರಸಕ್ತ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಸಾಮೂಹಿಕ ಅತ್ಯಾಚಾರ, ಶೋಷಣೆಗಳು ನಡೆಯುತ್ತಿದ್ದು ಅದನ್ನು ತಡೆಗಟ್ಟಲು ಶ್ರಮಿಸಬೇಕು. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು.
ಶೈಕ್ಷಣಿಕ ವರ್ಗದಲ್ಲಿ ಮಕ್ಕಳಿಗೆ ದೊರೆಯುವ ಎಲ್ಲಾ ಶಿಕ್ಷಣದ ಸೌಲಭ್ಯಗಳು ದೊರೆಯಬೇಕು. ಸಮಾಜದಲ್ಲಿರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಕಿರುಕುಳ ಅನ್ಯಾಯಗಳು ಉಂಟಾದಲ್ಲಿ ಸಂಬಂಧಿಸಿದವರು, ಸಾರ್ವಜನಿಕರು, ಅಧಿಕಾರಿಗಳು, ಮಂತ್ರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಬೇಕು. ಸಮಾಜದಲ್ಲಿ ಉತ್ತಮವಾದ ಮಾನವ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು. ಎಲ್ಲೇ ಮಾನವ ಹಕ್ಕುಗಳು ಉಲ್ಲಂಘನೆ ಆದರೆ ಅಲ್ಲಿ ನಾವು ಇರುತ್ತೇವೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos