‘ಅರಬ್ಬಿ’ ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ನಟನೆ!

‘ಅರಬ್ಬಿ’ ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ನಟನೆ!

ಬೆಂಗಳೂರು, ನ. 19: ಕರ್ನಾಟಕದ ದಕ್ಷ, ಪ್ರಾಮಾಣಿಕ, ಖಡಕ್ ಐಎಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅಣ್ಣಾಮಲೈ ರಾಜಿನಾಮೆ ನೀಡುತ್ತಿದ್ದಂತೆ ಮುಂದಿನ ನಡೆ ಏನಾಗಿರಬಹುದು ಎನ್ನುವ ಕುತೂಹಲ ಜನತೆಯಲ್ಲಿತ್ತು.

ಪೊಲೀಸ್ ಅಧಿಕಾರ ತೊರೆದ ಕರ್ನಾಟಕದ ಸಿಂಗಂ ಅಣ್ಣಾಮಲೈ ಸದ್ಯ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನರಿಗೆ ಸಹಾಯ ಮಾಡಬೇಕು ಎನ್ನುವುದು ಅಣ್ಣಾಮಲೈ ಕನಸು. ಸದ್ಯ ಸಮಾಜಿಕ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಅಣ್ಣಾಮಲೈ ಇದರ ಜೊತೆಗೆ ಸಿನಿಮಾರಂಗಕ್ಕು ಎಂಟ್ರಿಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

‘ಅರಬ್ಬಿ’ ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ‘ಅರಬ್ಬಿ’ ಪ್ಯಾರಾ ಈಜುಪಟು ಕೆ ಎಸ್ ವಿಶ್ವಸ್ ಜೀವನಾಧಾರಿತ ಸಿನಿಮಾ. ಚಿತ್ರದಲ್ಲಿ ವಿಶ್ವಾಸ್ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಾಸ್ ಕೋಚರ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪವರ್ ಫುಲ್ ಅಧಿಕಾರವನ್ನು ತೊರೆದು ಸಾಮಾಜಿಕ ಕಾರ್ಯ ಮಾಡುತ್ತಿರುವ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದರೆ ಅವರ ಸಂಭಾವನೆ ಎಷ್ಟಿರ ಬಹುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇರುತ್ತೆ. ಆದರೆ ಅಣ್ಣಾಮಲೈ ಪಡೆದ ಸಂಭಾವನೆ ಕೇಳಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಅರಬ್ಬಿ ಚಿತ್ರಕ್ಕಾಗಿ ಅಣ್ಣಾಮಲೈ ಕೇವಲ ‘1’ ರೂಪಾಯಿ ಪಡೆದಿದ್ದಾರಂತೆ.

 

ಫ್ರೆಶ್ ನ್ಯೂಸ್

Latest Posts

Featured Videos