ಅಂದು ಕಸದ ತೊಟ್ಟಿಯಲ್ಲಿ, ಇಂದು ಬಣ್ಣದ ಲೋಕದಲಿ.!

ಅಂದು ಕಸದ ತೊಟ್ಟಿಯಲ್ಲಿ, ಇಂದು ಬಣ್ಣದ ಲೋಕದಲಿ.!

ಮುಂಬೈ,. 27, ನ್ಯೂಸ್ ಎಕ್ಸ್ ಪ್ರೆಸ್: ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಅಯೋ ಹೆಣ್ಣು ಮಗುನಾ ಅಂತ ಅನಾಥಶ್ರಮಕ್ಕೆ ಬಿಟ್ಟು ಬಿಡುವ ಜನರಿದ್ದಾರೆ. ಜಗತ್ತು ಎಷ್ಟೆ ಮುಂದುವರೆದರೂ ಕೂಡ ಕೆಲವರ ಬುದ್ದಿ ಮಾತ್ರ ಬದಲಾಗುವುದಿಲ್ಲ. ಈ ರೀತಿ ಕಸದ ತೊಟ್ಟಿಯಲ್ಲಿ ಸಿಕ್ಕದ್ದ ಮಗುವೊಂದು ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾಳೆ.

ಹೆಣ್ಣು ಮಗುವೊಂದು ಕಸದ ತೊಟ್ಟಿಯಲ್ಲಿ ಇದ್ದದ್ದನ್ನ ನೋಡಿ ಯಾರೋ ಒಬ್ಬರು ಶಿಶು ಸಂರಕ್ಷಣಾ ಕೇಂದ್ರಕ್ಕೆ ಆ ಮಗುವನ್ನು ಒಪ್ಪಿಸಿದ್ದಾರೆ. ಬಾಲಿವುಡ್ ನಟನೊಬ್ಬ ಆ ಮಗುವನ್ನು ನೋಡಿ ಮನಸು ಮರುಗಿ ಆ ಮಗುವನ್ನು ದತ್ತು ಪಡೆದು ಆ ಮಗುವಿಗೆ ದಿಶಾನಿ ಎಂದು ಹೆಸರಿಟ್ಟಿದ್ದಾರೆ.

ಅದಾಗಲೇ ಆ ಬಾಲಿವುಡ್ ದಂಪತಿಗೆ 3 ಮಕ್ಕಳಿದ್ದರು ಕೂಡ ಈ ಮಗುವನ್ನು ದತ್ತು ಪಡೆದರು. ಬಾಲಿವುಡ್ ನಟ ಮಾಡಿದ ಆ ಕೆಲಸಕ್ಕೆ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಈ ದತ್ತು ಮಗಳ ತಂದೆ-ತಾಯಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹಾಗೂ ಇವರ ಪತ್ನಿ ಯೋಗಿತಾ ಬಾಲಿ. ಇದೀಗ ನ್ಯೂಯಾರ್ಕ್ ನಲ್ಲಿ ಅಭಿನಯ ತರಬೇತಿ ಪಡೆಯುತ್ತಿರುವ ದಿಶಾನಿ, ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಹಾಕಿ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಬಾಲಿವುಡ್ ಗೆ ಬರುವ ಮುನ್ನವೇ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos