ಕಾನೂನಿನ ಆಳ ಅಧ್ಯಯನ ಅವಶ್ಯ

  • In State
  • January 1, 2021
  • 167 Views
ಕಾನೂನಿನ ಆಳ ಅಧ್ಯಯನ ಅವಶ್ಯ

ಚಾಮರಾಜನಗರ: ಸಮಾಜದಲ್ಲಿ ಒಬ್ಬ ಉತ್ತಮ ವಕೀಲನಾಗಿ ಹೊರಹೊಮ್ಮ ಬೇಕಾದರೆ ಕಾನೂನಿನ ಆಳವಾದ ಅಧ್ಯಯನ ಅಗತ್ಯವಾಗಿಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಸದಾಶಿವ ಎಸ್. ಸುಲ್ತಾನಪುರಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಗ್ರಂಥಾಲಯದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿದರು.
ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ವೃತ್ತಿಯ ಘನತೆ ಮತ್ತು ಗೌರವವನ್ನು ವಕೀಲರು ಕಾಪಾಡಿಕೊಂಡು ಹೋಗಬೇಕು. ಕಕ್ಷಿದಾರರ ಹಿತಬಯಸುವಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಡೈರಿ ಮತ್ತು ಕ್ಯಾಲೆಂಡರ್ ವಕೀಲರಿಗೆ ಅತ್ಯಮೂಲ್ಯವಾದ ಸಾಧನವಾಗಿದೆ. ನ್ಯಾಯಾಲಯದಲ್ಲಿನ ಯಾವ ಪ್ರಕರಣಗಳ ಕಲಾಪವಿದೆ ಎಂದು ನಿಖರವಾಗಿ ತಿಳಿಯಲು ವಕೀಲರ ಡೈರಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೇಶ್ ಮಾತಾನಾಡಿ ವಕೀಲರು ವೃತ್ತಿಯ ಜೊತೆ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ಸನ್ನು ಕಾಣಬಹುದು ಎಂದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಜಿ ಬಾದಾಮಿ, ಮಾತನಾಡಿ ಸಮಾಜದಲ್ಲಿ ವಕೀಲ ವೃತ್ತಿ ಮಹತ್ವದಿಂದ ಕೂಡಿದೆ. ವಕೀಲರು ಸತ್ಯ, ನ್ಯಾಯ, ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಮಾತಾನಾಡಿ, ವಕೀಲರು ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ತಾಳ್ಮೆ, ಸಹನೆ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾದ್ಯ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos