ಹಿಂದೂಳಿದ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಆಗ್ರಹ

ಹಿಂದೂಳಿದ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಆಗ್ರಹ

ಕಾಗವಾಡ : ತಾಲೂಕಿನ ಪಂಚಾಮಸಾಲಿ ಲಿಂಗಾಯತ ಸಮಾಜ ಕಾರ್ಯಕರ್ತರಿಂದ ಹಿಂದೂಳಿದ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಕಾಗವಾಡ ಗ್ರೇಡ್-2 ತಹಸೀಲ್ದಾರ್ ಅಣ್ಣಾಸಾಹೇಬ ಕೋರೆಗೆ ಮನವಿ ಸಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜವು ಸಮುದಾಯದಲ್ಲಿ ಬಹುಸಂಖ್ಯಾತ ಸಮಾಜವಾಗಿದ್ದು, ಆರ್ಥಿಕ, ಶೈಕ್ಷಣಿಕವಾಗಿ ಹಿಂದೂಳಿದ ಸಮಾಜವಾಗಿದೆ. ಈ ಸಮಾಜದ ಮೂಲ ಕುಲ ಕಸುಬು ಕೃಷಿ ಹಾಗೂ ಕೃಷಿ ಆಧಾರಿತ ಕೂಲಿಂ ಅವಲಂಭಿಸಿ ಬದುಕನ್ನು ನಡೆಸುತ್ತಿದ್ದಾರೆ. ಈ ಸಮಾಜವನ್ನು 3ಬಿ ದಿಂದ 2ಎಗೆ ವರ್ಗಾಹಿಸಿ ಎಂದರು.

ಈ ಬೇಡಿಕೆಗಾಗಿ ಸ್ವಾಮೀಜಿಗಳು ಪಾದಯಾತ್ರೆ ಮಾಡುತ್ತಿದ್ದು, ಅವರಿಗೆ ಬೆಂಬಲ ಸೂಚಿಸಲು ನಾವು ಈ ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡರು ಹಾಗೂ ಕನ್ನಡ ಯುವಕ ಸಂಘದ ಅಧ್ಯಕ್ಷ ಡಾ. ಸಿದ್ದಗೌಡ ಕಾಗೆ ಹೇಳಿದರು.

ಪ್ರತಿಭಟನಾ ರ‍್ಯಾಲಿಯಲ್ಲಿ ಹಿರಿಯ ಮುಖಂಡರಾದ ಸಿದ್ದಗೌಡ ಪಾಟೀಲ, ವಿದ್ಯಾವರ್ಧಕ ಶಿಕ್ಷಣ ಸಮೀತಿಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ನ್ಯಾಯವಾದಿ ಕಾಕಾ ಪಾಟೀಲ, ರಮೇಶ ಚೌಗುಲೆ, ಶಶೀಕಾಂತ ಗುಮಟೆ, ಚೇತನ ಪಾಟೀಲ, ಪ್ರಕಾಶ ಪಾಟೀಲ, ಬಿ.ಜೆ.ಪಾಟೀಲ, ಶಿವಾನಂದ ನವಿನಾಳೆ, ಉಮೇಶ ಪಾಟೀಲ, ಸಚೀನ ಚೌಗುಲೆ, ಶಿವಾನಂದ ಚೌಗುಲೆ, ಅಕ್ಷಯ ಕೋರೆ, ಸೇರಿದಂತೆ ಅನೇಕರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos