ನಟ ಅಮಿತಾಭ್​ ಬಚ್ಚನ್ ಆರೋಗ್ಯದಲ್ಲಿ ಏರುಪೇರು!

ನಟ ಅಮಿತಾಭ್​ ಬಚ್ಚನ್ ಆರೋಗ್ಯದಲ್ಲಿ ಏರುಪೇರು!

ಬೆಂಗಳೂರು: ಬಾಲಿವುಡ್‌ನ ಹಿರಿಯ ನಟ ಅಮಿತಾಭ್​ ಬಚ್ಚನ್ ಅವರಿಗೆ ದಿಢೀರನೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಮಿತಾಭ್​ ಬಚ್ಚನ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 81ನೇ ವಯಸ್ಸಿನಲ್ಲೂ ಅವರು ಅದೇ ಕ್ರೇಜ್​ ಉಳಿಸಿಕೊಂಡಿದ್ದಾರೆ. ಭಾರಿ ಬೇಡಿಕೆ ಹೊಂದಿರುವ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ನಟ ಅಮಿತಾಭ್​ ಬಚ್ಚನ್​ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಈಗ 81 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅಮಿತಾಭ್​ ಬಚ್ಚನ್​ ಅವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಆದರೆ ಬಿಗ್​ ಬಿ ಅವರಿಗೆ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ  ಮಾಡಲಾಗಿದೆ. ಆದರೆ ಅವರಿಗೆ ಹೃದಯಸಂಬಂಧಿ ಅನಾರೋಗ್ಯ ಉಂಟಾಗಿಲ್ಲ ಎಂದು ವರದಿ ಆಗಿದೆ.

ಅಮಿತಾಭ್​ ಬಚ್ಚನ್​ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅವರ ಮಾಡಿದ ಎಕ್ಸ್​ (ಟ್ವಿಟರ್​) ಪೋಸ್ಟ್​ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದಾರೆ. ಸರ್ಜರಿ ಆದ ಬಳಿಕ ಅವರು ಈ ರೀತಿ ಪೋಸ್ಟ್​ ಮಾಡಿರಬಹುದು ಎನ್ನಲಾಗಿದೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos