ಅಂಬಿ ಅಭಿಮಾನಿಗಳಿಂದ ಕುಮಾರಸ್ವಾಮಿಗೆ ವಾರ್ನಿಂಗ್.!

ಅಂಬಿ ಅಭಿಮಾನಿಗಳಿಂದ ಕುಮಾರಸ್ವಾಮಿಗೆ ವಾರ್ನಿಂಗ್.!

ಬೆಮಗಳೂರು, . 24, ನ್ಯೂಸ್ ಎಕ್ಸ್ ಪ್ರೆಸ್: ಅಂಬರೀಶ್ ಹಾಗೂ ವಿಷ್ಣು ಅಭಿಮಾನಿಗಳು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಲ್ಲಿಯೂ  ಸಡಗರ ಸಂಭ್ರಮದಿಂದ ತಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳು ಆರಾಧ್ಯ ದೈವವೆಂದು ಪೂಜಿಸುವ  ವರ ನಟ ರಾಜ್ ಕುಮಾರ್ ಅವರ 90ನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತಿದೆ. ನೇತ್ರದಾನ, ಅನ್ನದಾನ, ರಕ್ತದಾನ ಮಾಡುತ್ತ ತುಂಬಾ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ಡಾ. ರಾಜ್ ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರದಿಂದ ಆಚರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರದ ಹಿನ್ನಲೆಯಲ್ಲಿಯೇ ವಿಷ್ಣು ಹಾಗೂ ಅಂಬಿ ಅಭಿಮಾನಿಗಳು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದ್ದಾರೆ.

ಡಾ ರಾಜ್ ಹುಟ್ಟುಹಬ್ಬ ಮಾಡುತ್ತಿದ್ದೀರಲ್ಲ ಅದರಂತೆ ಕನ್ನಡ ಚಿತ್ರರಂಗದ ದಿಗ್ಗಜರಾಗಿರುವ ಡಾ ವಿಷ್ಣು, ಅಂಬಿ ಹುಟ್ಟುಹಬ್ಬವನ್ನು ಆಚರಿಸುತ್ತೀರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರ ಸಾಲಲ್ಲಿ ಡಾ. ವಿಷ್ಣುವರ್ಧನ್, ಅಂಬರೀಶ್ ಇದ್ದಾರೆ. ಅವರ ಹುಟ್ಟುಹಬ್ಬವನ್ನು ಆಚರಿಸದೇ ತಾರತಮ್ಯ ಮಾಡೋದು ಸರಿಯಲ್ಲ. ಚಿತ್ರರಂಗದ ದಿಗ್ಗಜರ ವಿಚಾರದಲ್ಲಿ ತಾರತಮ್ಯ ಮಾಡಬೇಡಿ.

ಒಬ್ಬರ ಹುಟ್ಟುಹಬ್ಬವನ್ನು ಆಚರಿಸಿ, ಇನ್ನೊಬ್ಬರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಮುಖ್ಯಮಂತ್ರಿಗೆ ಅಭಿಮಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos