ಅಂಬೇಡ್ಕರ್ ಸೂಟು ಮತ್ತು ಕುವೆಂಪು ಸಂಸ್ಕೃತ

  • In Sahitya
  • January 18, 2019
  • 837 Views
ಅಂಬೇಡ್ಕರ್ ಸೂಟು ಮತ್ತು  ಕುವೆಂಪು ಸಂಸ್ಕೃತ

ವಿವಿಧ ಜಾತಿಗಳು ಕುವೆಂಪುರವರನ್ನು ಭಿನ್ನ ಭಿನ್ನವಾಗಿ ಓದಿಕೊಂಡಿವೆ. ಕುವೆಂಪುರವರನ್ನು ಅತ್ಯಂತ ಹೆಚ್ಚು ಓದಿದವರು ದಲಿತ – ಬಂಡಾಯ ಸಾಹಿತ್ಯ ಚಳುವಳಿಯ ಪ್ರಭಾವಕ್ಕೊಳಗಾದವರು ದಲಿತ, ಹಿಂದುಳಿದ ಜಾತಿಯ ಯುವಕ ಯುವತಿಯರು. 
ಕುವೆಂಪುರವರನ್ನು ವಿವಿಧ ಕಾಲಘಟ್ಟದಲ್ಲಿ ವಿವಿಧ ರೀತಿ ಓದಿಕೊಳ್ಳಲಾಗಿದೆ . ಇಷ್ಟೊಂದು ವೈವಿಧ್ಯಮಯ ಓದಿಗೊಳಗಾದ ಆಧುನಿಕ ಸಾಹಿತಿ ಕುವೆಂಪು ಮಾತ್ರ.

ಬ್ರಾಹ್ಮಣ ಓದು: ಇದರಲ್ಲಿ ಕಂದಾಚಾರಿ ಬ್ರಾಹ್ಮಣ ಓದು ಅದರೊಳಗೆ ನವೋದಯ ಕಂದಾಚಾರಿ ಮತ್ತು ನವ್ಯ ಕಂದಾಚಾರಿ ಓದು
ನವೋದಯ ಉದಾರವಾದಿ ಬ್ರಾಹ್ಮಣ ಓದುಗಳೂ ಇವೆ. ಈ ಹಂತದಲ್ಲಿ ಕುವೆಂಪು ಸಂಸ್ಕೃತ ಭೂಯಿಷ್ಟ ಕವನಗಳು, ರಾಮಾಯಣ ದರ್ಶನಂ ಮೊದಲಾದವು ಪ್ರಧಾನ.

ಒಕ್ಕಲಿಗರ ಕುವೆಂಪು ಪೂಜೆ ಮತ್ತು ಸೀಮಿತ ಓದು
ರಾಮಾಯಣ ದರ್ಶನದ ಮೆರವಣಿಗೆ, ಮನೆಯ ಶೋಕೆಸ್‌ನಲ್ಲಿ ಪ್ರದರ್ಶನ ಪ್ರಮುಖ ವಿಧಾನ. ಹೊಸದಾಗಿ ಉದ್ಯೋಗಸ್ಥರಾದ ವಿವಿ‌, ಕಾಲೇಜು ಒಕ್ಕಲಿಗ ಅಧ್ಯಾಪಕರಿಂದ ಅಲ್ಪ ಸ್ವಲ್ಪ ಓದು. ನವ್ಯರ ಟೀಕೆ ವಿರುದ್ಧ ಸಮರ್ಥನೆ. ವೈಭವೀಕರಣ ಗಂಗೋತ್ರಿ, ಸಹ್ಯಾದ್ರಿ ಅಭಿನಂದನಾ ಗ್ರಂಥಗಳ ಕಾಲ.

ದಲಿತ- ಹಿಂದುಳಿದ ಸಮುದಾಯದ ಓದು 
ತೇಜಸ್ವಿ, ಲಂಕೇಶ್, ಚಂಪಾರಿಂದ , ಜಾತಿ ವಿನಾಶ ಸಮಾವೇಶದಿಂದ ಆರಂಭ. ದಲಿತ ಬರಹಗಾರರು, ಬಂಡಾಯ ಸಾಹಿತ್ಯ ಸಮ್ಮೇಳನದ ನಂತರ ಬೆಳವಣಿಗೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ ಪ್ರಮುಖ ಓದು. ವಿಮರ್ಶೆ. ವೈಚಾರಿಕತೆ ಮತ್ತು ಭಾಷಣಗಳು ಪ್ರಧಾನ ಆಕರ್ಷಣೆ.
ಕಾಡಿನ ಕವಿಯು ನಾ ಎಂದು ಒಡನಾಡಿ ತಿಮ್ಮುವಿನ ನೆನಪಿನಲ್ಲಿ ಬರೆಯಲು ಆರಂಭ ಮಾಡಿದ ಕುವೆಂಪು ಸಂಸ್ಕೃತ ಭೂಯಿಷ್ಟ ಭಾಷೆಯನ್ನು ಬಳಸಿದ , ಬೇಂದ್ರೆಯವರ ಜಾನಪದ ಭಾಷೆ ಮತ್ತು ಶೈಲಿಯ ವಿಶೇಷದ ಬಗ್ಗೆ ಜಿ.ಎಸ್.ಶಿವರುದ್ರಪ್ಪನವರು ಮತ್ತಿತರರು ಗಾಂಧಿಯವರ ಅರೆ ಬೆತ್ತಲೆ ಫಕೀರತನ, ಯಾವಾಗಲೂ ಸೂಟು ಧರಿಸಿಯೇ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಅಂಬೇಡ್ಕರ್‌ರವರ ಸಾಮಾಜಿಕ ಒತ್ತಡಗಳ ಹೋಲಿಕೆ ನೀಡಿದ್ದಾರೆ. 

ಇನ್ನು ಸಾಹಿತಿ ಅಥವಾ ಪ್ರಸಿದ್ಧ ವಿಚಾರಶೀಲರ ವಿಚಾರಗಳು ಇಡೀ ದೇಶದ ಸಾಮಾಜಿಕ ಚಲನೆಯ ಬೆಳವಣಿಗೆಗಳು ‌. ಅವರವರ ಜಾತಿ ಸಮುದಾಯಗಳಿಗೂ, ಅವರ ವಿಚಾರಗಳಿಗೂ ನೇರ ಸಂಬಂಧವಿಲ್ಲ. ತಮ್ಮ ಜಾತಿಯವರು ಎಂಬ ಹೆಮ್ಮೆ, ಹಲವೊಮ್ಮೆ ಒಣ ಹೆಮ್ಮೆ ಮಾತ್ರ. ಇದು ಅವರ ಬರಹಗಳ ಮಾರಾಟಕ್ಕೆ ಸ್ವಲ್ಪ, ಓದಿಗೆ ಒಂಚೂರು ನೆರವಾಗಬಹುದು. 

ಕೃಪೆ: ಜಿ.ಎನ್‍.ನಾಗರಾಜ್‍, ಸಮಾಜ ವಿಜ್ಞಾನಿಗಳು

ಫ್ರೆಶ್ ನ್ಯೂಸ್

Latest Posts

Featured Videos