ಒಕ್ಕಲಿಗರ ಸ್ನೇಹ ಕೂಟ-2019

ಒಕ್ಕಲಿಗರ ಸ್ನೇಹ ಕೂಟ-2019

ಕೆ.ಆರ್.ಪುರ, ಸೆ. 14: ಶ್ರೀ ಭುವನೇಶ್ಪರಿ ಒಕ್ಕಲಿಗರ ಸಂಘ ಬೆಂಗಳೂರು ಪೂರ್ವ ತಾಲ್ಲೂಕು ಸಹಯೋಗದಲ್ಲಿ ಕೃಷ್ಣರಾಜಪುರ ವೃತ್ತ ಕುಲಬಾಂಧವರ ಕುಟುಂಬಗಳ ಸಮ್ಮಿಲನದ ಒಕ್ಕಲಿಗರ ಸ್ನೇಹ ಕೂಟವನ್ನು ಇದೆ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಜ ಸೇವಕರಾದ ಎನ್.ಎಮ್.ಮಂಜೂರಾಜ್ ತಿಳಿಸಿದರು.

ಒಕ್ಕಲಿಗರ ಸ್ನೇಹ ಕೂಟ ಕುರಿತು ತಮ್ಮ ಗೃಹ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಸಂದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಕ್ಕಲಿಗರ ಸ್ನೇಹ ಕೂಟ ಕಾರ್ಯಕ್ರಮವನ್ನು ಮೂಲದಿಂದಲೂ ನಡೆಸಿಕೊಂಡು ಬಂದಿದ್ದು ಕಳೆದ 15 ವರ್ಷಗಳಿಂದ ನಿಲ್ಲಿಸಿರುವ ಈ ಕಾರ್ಯಕ್ರಮವನ್ನು ಪುನ: ಪ್ರಾರಂಭಿಸಲಾಗುವುದೆಂದರು.

ಕೃಷ್ಣರಾಜಪುರ ವೃತ್ತ ಭಾಗದಲ್ಲಿ ವಾಸ ಮಾಡುತ್ತಿರುವ ಜನಾಂಗದವರು ಒಬ್ಬರಿಗೊಬ್ಬರು ಪರಿಚಯವಿಲ್ಲದೆ ವಾಸಿಸುತ್ತಿ

ರುವವರನ್ನು ಬೆಸೆಯುವ ಕಾರ್ಯಕ್ರಮವೆ ಒಕ್ಕಲಿಗರ ಸ್ನೇಹ ಕೂಟ ಎಂದರು. ಇದೆ ಭಾನುವಾರ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಮಠದಪೀಠಾದ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ಉದ್ಗಾಟನೆಯಾಗಲಿದೆ ಎಂದರು. ದಿನವಿಡಿ ನಡೆಯುವ ಕಾರ್ಯಕ್ರದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ದೆ, ವಿವಿಧ ಆಟಗಳ ಸ್ಪರ್ದೆ, ಮಹಿಳೆಯರಿಗೆ ರಂಗೋಲಿ ಸ್ಪರ್ದೆ ಮತ್ತು ಪುರುಷರಿಗೆ ಮ್ಯೂಜಿಕಲ್ ಚೇರ್, ಲೆಮೆನ್ ಅಂಡ್ ಸ್ಪೂನ್ ಹಾಗು ವಿವಿಧ ಮನರಂಜನಾ ಸ್ಪರ್ದೆಗಳನ್ನು ಆಯೋಜಿಸಲಾಗಿದೆ ಎಂದರು. ಆದರ್ಶ ದಂಪತಿಗಳ ಕ್ವಿಜ್ ಹಾಗು 2017-18 ಮತ್ತು 2018-19 ನೇಯ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದೆಂದರು. ಕೊನೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದೆಂದು ಅವರು ತಿಳಿಸಿದರು.

ಈ ಸಂದರ್ಬದಲ್ಲಿ ಹರಿಣೇಂದ್ರ, ಪ್ರಸನ್ನಕುಮಾರ್, ಸುರೇಶ್, ರಾಜೇಶ್, ನಾರಾಯಣಸ್ವಾಮಿ, ನಾಗರಾಜು, ಚಂದ್ರು, ತೇಜಸ್ ಕುಮಾರ್, ಶ್ರೀಧರ್‌ ಬಾಬು, ರಮೇಶ್, ರವಿ, ಬಾಲಕೃಷ್ಣ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos