ಮದ್ಯ ಮನೆ ಬಾಗಿಲಿಗೆ!

ಮದ್ಯ ಮನೆ ಬಾಗಿಲಿಗೆ!

ಬೆಂಗಳೂರು, ಸೆ. 5: ಇನ್ಮುಂದೆ ನೀವು ಮದ್ಯವನ್ನ ಬಾರ್ಗೆ ಹೋಗಿಯೇ ಕೊಳ್ಳಬೇಕು, ಹೋಮ್ ಡೆಲಿವರಿ ಇಲ್ಲ ಎನ್ನುವ ಬೇಸರ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಈ ಬೇಸರ ಶೀಘ್ರವೇ ಶಮನವಾಗಲಿದೆ. ಕಾರಣ, ಕರ್ನಾಟಕ ಅಬಕಾರಿ ಇಲಾಖೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಹೊಸ ಯೋಜನೆ ರೂಪಿಸುತ್ತಿದೆ!

ಇದನ್ನು ತಪ್ಪಿಸಲು ಮನೆ ಬಾಗಿಲಿಗೆ ಮದ್ಯ ಯೋಜನೆ ಸಹಕಾರಿಯಾಗಲಿದೆ ಎಂಬ ಆಲೋಚನೆ ಸಚಿವ ಎಚ್ನಾಗೇಶ್ ಅವರದ್ದು.  ಹೌದು, ಹೀಗೊಂದು ಯೋಜನೆ ರೂಪಿಸಲು ಅವರು ಚಿಂತನೆ ನಡೆಸಿದ್ದು, ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಹಾಲು ಸರಬರಾಜು ಮಾದರಿಯಲ್ಲೇ ಮದ್ಯ ನೀಡಲಾಗುತ್ತದೆಯಂತೆ! “ಹಾಲನ್ನು ಮನೆ ಮನೆಗೆ ತಲುಪಿಸಿದ ರೀತಿಯಲ್ಲೇ ಮದ್ಯ ಸರಬರಾಜು ಮಾಡಲಾಗುತ್ತದೆ. ಅದಕ್ಕಾಗಿ ಮೊದಲೇ ಗುರುತಿನ ಚೀಟಿ ಹೊಂದಿರಬೇಕು. ಜಿಲ್ಲಾಧಿಕಾರಿಗಳು ಈ ಕಾರ್ಡ್ ನೀಡುತ್ತಾರೆ. ಈ ಚೀಟಿ ಇದ್ದವರಿಗೆ ಮಾತ್ರ ಮದ್ಯವನ್ನು ಮನೆ ಬಾಗಿಲಿಗೆ ನೀಡಲಾಗುತ್ತದೆ,” ಎಂದು ಅವರು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos