ಅರಬ್ಬಿಯಲ್ಲಿ ವಾಯುಭಾರ ಕುಸಿತ

ಅರಬ್ಬಿಯಲ್ಲಿ ವಾಯುಭಾರ ಕುಸಿತ

ಬೀದರ್, ಡಿ. 2:  ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಉತ್ತರ ಭಾಗದಲ್ಲಿ ಮಳೆ ಪ್ರಾರಂಭವಾಗಿದ್ದು, ಎಫೆಕ್ಟ್ ಗಡಿ ಜಿಲ್ಲೆ ಗಳಿಗೂ ತಟ್ಟಿದೆ.

ಬೆಳಗ್ಗಿನಿಂದಲೂ ತುಂತುರು ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದು ಕಡೆ ತುಂತುರು ಮಳೆ ಮೊತ್ತೊಂದು ಕಡೆ ಅತಿ ಚಳಿಗೆ ಜಿಲ್ಲೆಯ ಜನರು ಕಂಗಾಲಾಗಿದ್ದು, ಮನೆಯಿಂದ ಹೊರಗೆ ಬರಲು ಜನರು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಯುಭಾರ ಕುಸಿತದಿಂದಾಗಿ ಜನರು ಕೆಲಸಕ್ಕೆ ಹೋಗಬೇಕಾದರೂ ಹಿಂದೇಟು ಹಾಕುತ್ತಿದ್ದಾರೆ. ವಾಯುಭಾರ ಕುಸಿತದಿಂದಾಗಿ ಮೂರು ದಿನಗಳ ಕಾಲ ಸತತವಾಗಿ ತುಂತುರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

 

ಫ್ರೆಶ್ ನ್ಯೂಸ್

Latest Posts

Featured Videos