ಅಡಿಕೆ ಆರೋಗ್ಯಕ್ಕೆ ದುಷ್ಪರಿಣಾಮವನ್ನು ಬೀರುವುದಿಲ್ಲ

ಅಡಿಕೆ ಆರೋಗ್ಯಕ್ಕೆ ದುಷ್ಪರಿಣಾಮವನ್ನು ಬೀರುವುದಿಲ್ಲ

ನವದೆಹಲಿ, ಜು. 18 : ಇಂದು ದೆಹಲಿಯಲ್ಲಿ ಮಾನ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಹರ್ಷವರ್ಧನ್ ಅವರನ್ನು ಭೇಟಿ ಮಾಡಿದ ಕರ್ನಾಟಕ ಬಿಜೆಪಿ ಸಂಸದರ ನಿಯೋಗವು. ಯಾವುದೇ  ವೈಜ್ಞಾನಿಕ ಕಾರಣಗಳಿಲ್ಲದೇ ಕೇವಲ ಸುಪ್ರೀಂ ಕೋರ್ಟಿನಲ್ಲಿರುವ ಅಫಿಡವಿಟ್  ಆಧಾರದಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಉತ್ತರವನ್ನು ಸಂಸತ್ತಿನಲ್ಲಿ ನೀಡಿದ  ಸಚಿವಾಲಯದ ನಿಲುವಿಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರದ ಈ ನಿಲುವು ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ದುಷ್ಪರಿಣಾಮವನ್ನು ಬೀರುವುದರಿಂದ ICAR-CPCRI ಸಂಸ್ಥೆಗಳು ಅಡಿಕೆ ಸೇವನೆಯು ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮವನ್ನು ಬೀರುವುದಿಲ್ಲ ಎಂದು ಖಚಿತಪಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಅಡಿಕೆ ಬೆಳೆಗಾರ ಹಿತ ಕಾಯುವ ಭರವಸೆ ಮೂಡಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ಹಿಂದಕ್ಕೆ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸಂಸದರಾದ ಕು.ಶೋಭಾ ಕರಂದ್ಲಾಜೆ, ಶ್ರೀ ನಳಿನ್ ಕುಮಾರ್ ಕಟೀಲು ಅವರು ಮನವಿ ಮಾಡಿದರು. ಈ ಸಮಯದಲ್ಲಿ  ಸಂಸದರಾದ ಶ್ರೀ ಜಿ.ಎಮ್.ಸಿದ್ದೇಶ್ವರ, ಶ್ರೀ ಎ.ನಾರಾಯಣಸ್ವಾಮಿ, ಶ್ರೀ ಅಣ್ಣಾಸಾಹೇಬ್ ಜೊಲ್ಲೆ ಅವರು ಜೊತೆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos