ಎಬಿವಿಪಿ ಧರಣಿ

ಎಬಿವಿಪಿ ಧರಣಿ

ಔರಾದ:ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ಸೇವೆ ಮತ್ತು ಹಾಸ್ಟೆಲ್ ಸೇವೆಗಳನ್ನು ಪುನರಾರಂಭಿಸಲು ಗುರುವಾರ ಕನ್ನಡಾಂಬೆ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಶಾಲಾ-ಕಾಲೇಜುಗಳು ಹಂತ ಹಂತವಾಗಿ ಪುನರಾರಂಭಗೊಂಡಿದ್ದು, ಎಲ್ಲ ಜಿಲ್ಲೆಗಳಲ್ಲಿ 6ನೇ ತರಗತಿ ಯಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಕಾಲೇಜುವರೆಗೆ ತರಗತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ, ಸಾರಿಗೆ ಸಂಸ್ಥೆ ಎಲ್ಲಾ ಬಸ್ ಸೇವೆ ಒದಗಿಸುತ್ತಿದ್ದು, ಕೆಲ ಹಳ್ಳಿಗಳಲ್ಲಿ ಇನ್ನೂ ಪ್ರಾರಂಭವಾಗಿಲ್ಲ, ದಿನಕ್ಕೆ ಒಂದು ಅಥವಾ ಎರಡು ಬಸ್ ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸಂಚಾರವಿಲ್ಲದೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ, ಈ ಸಮಸ್ಯೆಯನ್ನು ಬೇಗ ಸರಿಪಡಿಸಿ ಎಂದು ತಿಳಿಸಿದರು.
ವಿದ್ಯಾರ್ಥಿವೇತನವನ್ನು ತಕ್ಷಣ ಬಿಡುಗಡೆ ಗೊಳಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರಕ್ಕೆ ಆಗ್ರಹಿಸಿದೆ. ವಿದ್ಯಾರ್ಥಿಗಳು ಹಾಸ್ಟೆಲಿಗೆ ಅವಲಂಬಿತವಾಗಿರುವುದರಿಂದ, ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಎಬಿವಿಪಿ ಪ್ರಮುಖರು ಅಶೋಕ್ ಶೆಂಬೆಳ್ಳಿ, ಹಾವಪ್ಪಾ ದ್ಯಾಡೆ, ಮಲ್ಲಿಕಾರ್ಜುನ್ ಟೆಕರಾಜ, ರಮೇಶ ವಾಗ್ಮರೆ, ಮಾಹಾದೆವ ಸಿಂದೆ, ಅನಿಲ ಮೆತ್ರ, ಸುರೇಶ, ಪ್ರೀಯಾಂಕಾ, ಪೂಜ, ಸುಶ್ಮಿತಾ, ಕವಿತಾ, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos