ಅಮಿರ್ ಖಾನ್ ಗೆ ಹುಟ್ಟು ಹಬ್ಬದ ಸಂಭ್ರಮ

ಅಮಿರ್ ಖಾನ್ ಗೆ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು: ಮಿ.ಫರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಅಮಿರ್ ಖಾನ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಅಮೀರ್ ಖಾನ್.. ಇವರು ವಿಭಿನ್ನ ವಯಸ್ಸಿನ ಪಾತ್ರಗಳಿಗಾಗಿ ತಮ್ಮನ್ನ ತಯಾರು ಮಾಡಿಕೊಂಡು, ಎಲ್ಲಾ ಸಿನಿಮಾಗಳು ಸೂಪರ್​ ಹಿಟ್​ ಆಗುತ್ತವೆ ಅನ್ನೋದನ್ನ ಸಾಬೀತು ಮಾಡುವ​ ನಟ. ಇಂದು ಬಾಲಿವುಡ್​ನ ಈ ಮಿಸ್ಟರ್​ ಪರ್ಫೆಕ್ಟ್ ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎನ್ನುವುದಕ್ಕಿಂತ ತಾವೊಬ್ಬ ‘ಮಿಸ್ಟರ್ ಪ್ಯಾಶನೇಟ್’ ಎಂದು ಭಾವಿಸುತ್ತಾರೆ ಅಮೀರ್ ಖಾನ್.

ಸಂದೇಶಗಳ ಮೂಲಕ ಜನರ ಮನ ಗೆದ್ದ ನಟ: ನಟನಾಗಿರಲಿ ಅಥವಾ ನಿರ್ದೇಶಕನಾಗಿರಲಿ ಇಲ್ಲ ನಿರ್ಮಾಪಕನಾಗಿರಲಿ ಅಮೀರ್ ಪ್ರೇಕ್ಷಕರಿಗೆ ಮನರಂಜನೆ ಮಾತ್ರವಲ್ಲ, ಸಮಾಜಕ್ಕೆ ಒಂದು ಸಂದೇಶವನ್ಹು ನೀಡುವ ಕೆಲಸವನ್ನು ತಮ್ಮ ಚಿತ್ರಗಳ ಮೂಲಕ ಮಾಡುತ್ತಲೇ ಇರುತ್ತಾರೆ. ಅವರ ಲಗಾನ್, ಗಜಿನಿ, 3 ಈಡಿಯಟ್ಸ್ , PK, ದಂಗಲ್, ಸೀಕ್ರೆಟ್ ಸೂಪರ್‌ಸ್ಟಾರ್ ಮುಂತಾದ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರಗಳ ಮೂಲಕ ಚಿತ್ರ ರಸಿಕರಿಗೆ ಜೀವನದ ಪಾಠ ಹಾಗೂ ಒಂದು ಉತ್ತಮ ಸಂದೇಶವನ್ನು ಸಾರಿದ್ದಾರೆ ಎಂಬುದು ಗಮನಾರ್ಹ

 

ಫ್ರೆಶ್ ನ್ಯೂಸ್

Latest Posts

Featured Videos