ವಾಹನ ಸವಾರರ ಪರದಾಟ

ವಾಹನ ಸವಾರರ ಪರದಾಟ

ಶಹಾಪುರ: ತಾಲೂಕಿನ ಮದ್ರಕಿ ಗ್ರಾಮಕ್ಕೆ ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಸಂಕಟವಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಜನರು ಹಿಡಿ ಶಾಪ ಹಾಕುವಂತಾಗಿದೆ. ದುರಸ್ಥೀಗೊಳ್ಳದ ರಸ್ತೆಯು ಅನಾಥವಾಗಿದ್ದು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಲಕ್ಷ್ಯಾಗಟ್ಟಲೇ ಹಣ ಖರ್ಚು ಮಾಡಿ ಜನರ ಸುಗಮ ಸಂಚಾರಕ್ಕೆ ಅನೂಕೂಲವಾಗಲೂ ರಸ್ತೆ ನಿರ್ಮಿಸಿದ್ದು ಇದೀಗ ರಸ್ತೆಯೂ ತಗ್ಗುಗಳಿಂದ ಕೂಡಿದ್ದು ಈ ವರೆಗೂ ದುರಸ್ಥೀಗೆ ಮುಂದಾಗಿಲ್ಲಾ. ಇನ್ನೂ ಗ್ರಾಮಕ್ಕೆ ಹೋಗುವ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿರುವುದರಿಂದ ಸವಾರರಿಗೆ ಆತಂಕ ಮೂಡಿಸಿದೆ. ಲಕ್ಷಾಗಟ್ಟಲೇ ಅನುದಾನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡದೇ ಕೊಕ್ಕೆ ಹಾಕಲಾಗಿದೆ. ಅನುದಾನ ರಸ್ತೆಗೋ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೊಬಿಗೋ ಎಂಬ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಿದ್ದು ಗ್ರಾಮಸ್ಥರ ಅಪಸ್ವರಕ್ಕೆ ಕಾರಣವಾಗಿದೆ.

ಇನ್ನು ಹದಗೆಟ್ಟ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಪ್ರತಿನಿತ್ಯ ಮದ್ರಕಿ ಗ್ರಾಮದ ಗ್ರಾಮಸ್ಥರು, ವಿದ್ಯಾರ್ಥಿಗಳು ದಿನನಿತ್ಯದ ಕಾರ್ಯಗಳಿಗೆ ನಗರಕ್ಕೆ ತೆರಳಲಿದ್ದು ಬಸ್‍ಗಾಗಿ ನಿಲ್ಲಲು ಬಸ್‍ಸ್ಟ್ಯಾಂಡ್ ವ್ಯವಸ್ಥೆಯಿಲ್ಲ. ಗ್ರಾಮಕ್ಕೆ ಬಸ್ ಬಂದರು ಸಹ ಸರಿಯಾದ ಸಮಯಕ್ಕೆ ಬಾರದೇ ಇದ್ದು ರಾಜ್ಯ ಹೆದ್ದಾರಿಯ ರಸ್ತೆಯ ಅಕ್ಕ ಪಕ್ಕದಲ್ಲಿ ನಿಂತು ಹೋಗುವ ವಿದ್ಯಾರ್ಥಿಗಳು, ಗ್ರಾಮಸ್ಥರು ಸೂಕ್ತ ಬಸ್‍ನ ವ್ಯವಸ್ಥೆಯಿಲ್ಲದೇ ರೋಸಿ ಹೋಗಿದ್ದಾರೆ. ಇಷ್ಟೇಲ್ಲ ಸಮಸ್ಯೆಗಳು ಗ್ರಾಮದಲ್ಲಿ ಇದ್ದರು ಸಹ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಮಾತ್ರ ಗ್ರಾಮದ ಸಮಸ್ಯೆಗಳನ್ನು ಆಲಿಸಲು ಮುಂದಾಗಿಲ್ಲಾ. ಇಂತಹ ಹದಗೆಟ್ಟ ರಸ್ತೆಯಲ್ಲಿ ಗರ್ಭಿಣಿಯರನ್ನು , ರೋಗಿಗಳನ್ನು, ಹಳ್ಳಿಗಳಿಂದ ಪಟ್ಟಣಕ್ಕೆ ಕರೆತರುವುದು ಸಾಹಸದ ಕಲಸವೇ ಆಗಿದೆ. ಕೂಡಲೇ ಸುಗಮ ಸಂಚಾರಕ್ಕೆ ಕ್ರಮ ಜರುಗಿಸದಿದ್ದರೇ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವು ದೆಂದು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಎಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos