‘ಡಾಲಿ’ ಗೆ ಬಾಲಕನಿಂದ ಉಡುಗೊರೆ

‘ಡಾಲಿ’ ಗೆ ಬಾಲಕನಿಂದ ಉಡುಗೊರೆ

ಹುಬ್ಬಳ್ಳಿ, ಡಿ. 31: ಧನಂಜಯ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬೇಡಿಕೆ ಇರುವ ನಟ. ‘ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಹವಾ ಎಬ್ಬಿಸಿರೊ ನಟ.

ಹೌದು, ಇತ್ತೀಚಿಗೆ ಹುಬ್ಬಳ್ಳಿಗೆ ಹೋಗಿದ್ದ ಧನಂಜಯಗೆ ಬಾಲಕನೊಬ್ಬ 10 ರೂಪಾಯಿ ನೀಡಿದ್ದಾನೆ. ಅದು ಧನಂಜಯ ಅವರಿಂದ ಡೈಲಾಗ್ ಹೇಳಿಸಿ, ಕೊನೆಗೆ ತಾನೂ ಡೈಲಾಗ್ ಹೇಳಿ ಧನುಗೆ 10 ರೂಪಾಯಿ ಗಿಫ್ಟ್ ನೀಡಿದ್ದಾನೆ.

ಫೋಟೋವೊಂದನ್ನು ಶೇರ್‌ ಮಾಡಿಕೊಂಡಿರುವ ಧನಂಜಯ, ‘ತಾನು ಡೈಲಾಗ್ ಹೇಳಿ, ನನ್ನ ಹತ್ರನು ಡೈಲಾಗ್ ಹೇಳಿಸಿ, ಗಿಫ್ಟ್ ಕೊಟ್ಟ ಹುಬ್ಬಳ್ಳಿ ಹುಡುಗ. ಇಂಥ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು. ಒಂದು ರೂಪಾಯಿ ಕೊಡ್ದೆ ವರ್ಷಾನುಗಟ್ಟಲೆ ಕಲಾವಿದರನ್ನು ದುಡುಸ್ಕೊಳೋರ್ ಮಧ್ಯೆ ನಿಂದು ತುಂಬ ದೊಡ್ ಮನ್ಸು ಕಣ್ಲ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos