ದವಸ ಧಾನ್ಯ, ಸಿಹಿಪದಾರ್ಥಗಳಿಂದ ತಯಾರಿಸಿದ ಹೆಣ್ಣು ಗೊಂಬೆ

ದವಸ ಧಾನ್ಯ, ಸಿಹಿಪದಾರ್ಥಗಳಿಂದ ತಯಾರಿಸಿದ ಹೆಣ್ಣು ಗೊಂಬೆ

ಹುಬ್ಬಳ್ಳಿ, ಜ. 25: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯು ಹೆಬಸೂರು ಗ್ರಾಮದಲ್ಲಿ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮೇಲ್ವಿಚಾರಕಿ ಪ್ರೇಮಲತಾ ಅವರು ವಿವಿಧ ದವಸ ಧಾನ್ಯಗಳನ್ನೊಳಗೊಂಡ ಸಿಹಿಪದಾರ್ಥಗಳಿಂದ ತಯಾರಿಸಿದ ಆಕರ್ಷಕ ಹೆಣ್ಣು ಗೊಂಬೆಯನ್ನು ಪ್ರದರ್ಶಿಸಿದರು.

ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೊಪ್ಪು, ತರಕಾರಿಗಳು, ಕಬ್ಬು ಮತ್ತು ಕೊಬ್ಬಿನ ಪದಾರ್ಥಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಲಾಯಿತು. ಹೆಣ್ಣು ಮಗುವಿನ ಪೋಷಣೆ ಪ್ರೋತ್ಸಾಹಿಸಲು ರಾಷ್ಟ್ರೀಯ ಪೋಷಣೆ ಅಭಿಯಾನದ ಅಂಗವಾಗಿ ಪೌಷ್ಟಿಕ ಪದಾರ್ಥಗಳಿಂದ ರಂಗೋಲಿ, ಪಿರಮಿಡ್ ಮತ್ತಿತರ ರಚನೆಗಳನ್ನು ಬಿಡಿಸಲಾಗಿತ್ತು. ರಸಪ್ರಶ್ನೆ, ಭಾಷಣ ಸ್ಪರ್ಧೆಗಳು ಜರುಗಿದವು. ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ವಿತರಿಸಲಾಯಿತು.

ಈ ಸಂರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಸೇರಿದಂತೆ ಸ್ಥಳೀಯ ತಾಪಂ, ಗ್ರಾ.ಪಂ.ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos