ನಟ ವಿಜಯ್ ದೇವರಕೊಂಡಗೆ ಫೇಕ್ ಲೆಟರ್..!

ನಟ ವಿಜಯ್ ದೇವರಕೊಂಡಗೆ ಫೇಕ್ ಲೆಟರ್..!

ಬೆಂಗಳೂರು, ಫೆ.28, ನ್ಯೂಸ್ಎಕ್ಸ್ ಪ್ರೆಸ್: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಪತ್ರ ಹೆಡ್ ಬಳಸಿ ನಟ ವಿಜಯ್ ದೇವರಕೊಂಡ ಅವರಿಗೆ ಪತ್ರ ಬರೆಯಲಾಗಿದೆ. ಜಯನಗರದ 4ನೇ ಬ್ಲಾಕ್​ನಲ್ಲಿರುವ ಎಸ್​.ಎಲ್​.ಕೃಷ್ಣ ಎಂಬ ಆರೊಪಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ನಕಲು ಪತ್ರ ಹೆಡ್ ಸೃಷ್ಟಿಸಿ ವಿಜಯ್​ ದೇವರಕೊಂಡ ಅವರ ಅಡ್ರೆಸ್​ಗೆ ಸ್ಪೀಡ್​ ಪೋಸ್ಟ್​ ಮಾಡಿದ್ದಾನೆ. ನಮ್ಮ ಕಂಪನಿಯ officers near by ಎಂಬ ಮೊಬೈಲ್ ಅಪ್ಲಿಕೇಶನ್ ಒಂದಕ್ಕೆ ಬ್ರಾಂಡ್ ಅಂಬಾಸಿಡರ್​ ಅಥವಾ ಪಾರ್ಟನರ್​ ಆಗಿ ಬನ್ನಿ ಅಂತಾ ಸುಳ್ಳು ಪತ್ರ ಬರೆದು ಪೋಸ್ಟ್​ ಮಾಡಿದ್ದ. ಅಲ್ಲದೇ ಪತ್ರದಲ್ಲಿ ಸುಧಾಮೂರ್ತಿ ಅವರ ನಕಲಿ ಸಹಿ ಕೂಡ ಮಾಡಿದ್ದಾನೆ.

ಆದರೆ ವಿಜಯ್​ ದೇವರಕೊಂಡ ಅವರ ಸರಿಯಾದ ವಿಳಾಸ ಬರೆಯದ ಕಾರಣಆ ಪತ್ರವನ್ನು ಇನ್ಫೋಸಿಸ್​ ಕಚೇರಿಗೇ ​ಹಿಂದುರುಗಿಸಿದ್ದಾರೆ. ಈ ವೇಳೆ ಸುಧಾಮೂರ್ತಿ ಪತ್ರ ಚೆಕ್​ ಮಾಡಿದಾಗ ಅಸಲಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos