ಅಗ್ನಿಕುಲವಂಶ ಒಗ್ಗಟ್ಟು ಪ್ರದರ್ಶನಕ್ಕೆ ಕರೆ

ಅಗ್ನಿಕುಲವಂಶ ಒಗ್ಗಟ್ಟು ಪ್ರದರ್ಶನಕ್ಕೆ ಕರೆ

ಮಾಲೂರು: ವಹ್ನಿಕುಲ ಕ್ಷತ್ರಿಯ ಸಮುದಾಯದ ಒಗ್ಗಟ್ಟು ಪ್ರದರ್ಶನಕ್ಕಾಗಿ ಈಗಾಗಲೇ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದು, ತಾಲೂಕು ಮಟ್ಟದ ಬೃಹತ್ ಸಮಾವೇಶ ಮಾಡಿ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ತಿಗಳ ಸಮನ್ವಯ ಸಮಿತಿ ತಾಲ್ಲೂಕು ಅಧ್ಯಕ್ಷ ಬಡಗಿ ಎಂ ವಿ ಶ್ರೀನಿವಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮುದಾಯದವರು ಕಷ್ಟಪಟ್ಟು ಅಲ್ಪಸ್ವಲ್ಪ ಜಮೀನಿನಲ್ಲಿ ತರಕಾರಿ ಸೇರಿದಂತೆ ಹಲವು ಆಹಾರ, ಹೂ, ಹಣ್ಣು ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಬೆಳೆದು ಸಮಾಜಕ್ಕೆ ಕೊಡುಗೆ ಅತಿ ಹೆಚ್ಚಾಗಿ ನೀಡುತ್ತಿದ್ದಾರೆ. ದುರದೃಷ್ಟವಶಾತ್ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮುದಾಯವನ್ನು ಯಾವುದೇ ಪಕ್ಷಗಳು ಗುರುತಿಸುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ೪೦ ಲಕ್ಷ ಮತದಾರ ವಹ್ನಿಕುಲ ತಿಗಳ ಸಮುದಾಯದವರು ಇದ್ದೇವೆ, ತಾಲೂಕಿನಲ್ಲಿ ೩ನೇ ಸ್ಥಾನದಲ್ಲಿದ್ದರೂ ರಾಜ್ಯದ ಬಿಜೆಪಿ,ಜೇಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಎಲ್ಲ ರೀತಿಯಲ್ಲಿ ನಮ್ಮ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಂಡು ಕಡೆಗಣಿಸಿದ್ದಾರೆ ಮುಂದಿನ ದಿನಗಳಲ್ಲಿ ಬರುವಂತಹ ಗ್ರಾಪಂ, ತಾಪಂ, ಜಿ ಪಂ, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಗುರುತಿಸುವ ಕೆಲಸವಾಗಬೇಕು, ಈ ಹಿನ್ನಲೆಯಲ್ಲಿ ಸಮುದಾಯದ ಒಗ್ಗಟ್ಟು ಪ್ರದರ್ಶನ ಅನಿವಾರ್ಯ ಎಂದರು.
ಸಮನ್ವಯ ಸಮಿತಿ ಗೌರವ ಅದ್ಯಕ್ಷ ಬೋರ್ ನಾರಾಯಣ ಸ್ವಾಮಿ ಮಾತಾನಾಡಿ ಹಿಂದುಳಿದ ವರ್ಗಕ್ಕೆ ಸೇರಿರುವ ತಿಗಳ ಜನಾಂಗದವರು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕಾದರೆ ಶಿಕ್ಷಣವನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಬೇಕು, ತಿಗಳ ಜನಾಂಗವನ್ನು ರಾಜಕೀಯವಾಗಿ ಗುರ್ತಿಸಿ ಸ್ಥಾನ ಮಾನವನ್ನು ನೀಡದೆ ಧೋರಣೆ ಮಾಡುತ್ತಿದ್ದಾರೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾಲ್ಗುಣ, ತಾಲ್ಲೂಕು ಉಪಾಧ್ಯಕ್ಷ ದ್ಯಾಪಸಂದ್ರ ಅಮರ್, ಪ್ರಧಾನ ಕಾರ್ಯದರ್ಶಿ ಟಿ.ಆರ್.ರಮೇಶ್ ಬಾಬು, ಖಜಾಂಚಿ ಡಿ.ಎನ್.ಗೋಪಾಲ್, ಟೇಕಲ್ ಮೇಲ್ವಿಚಾರಕ ಸಂಪAತ್, ಕಾರ್ಯದರ್ಶಿ ಪಟಾಕಿ ರಘು, ದ್ಯಾಪಸಂದ್ರ ಚಂದ್ರು, ರಮೇಶ್, ಕರಾಟೆ ಶ್ರೀನಿವಾಸ್,ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos