ಸ್ಥಗಿತಗೊಂಡಿದ್ದ 9 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪುನರ್ಆರಂಭ

ಸ್ಥಗಿತಗೊಂಡಿದ್ದ 9 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪುನರ್ಆರಂಭ

ನವದೆಹಲಿ:
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ
ಉಂಟಾಗಿರುವ ಕಾರಣ ಸ್ಥಗಿತಗೊಂಡಿದ್ದ 9 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪುನರ್‌ ಆರಂಭಗೊಳ್ಳಲಿದೆ.

ಶ್ರೀನಗರ, ಜಮ್ಮು, ಲೇಹ, ಪಠಾಣ್‌ಕೋಟ್‌,
ಅಮೃತಸರ, ಶಿಮ್ಲಾ, ಕಂಗ್ರಾ, ಕುಲು, ಮನಾಲಿ, ಪಿತೋರಗರ್ ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಗಳ
ಹಾರಾಟವನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು.

ಶ್ರೀನಗರದ ವಿಮಾನ ನಿಲ್ದಾಣ ಪ್ರಾಧಿಕಾರದ
ಅಧಿಕಾರಿಗಳು, ‘ತುರ್ತುಪರಿಸ್ಥಿತಿಯ ಕಾರಣ ನಾಗರಿಕ ವಿಮಾನಗಳ ಹಾರಾಟ ಕೆಲ ಕಾಲದವರೆಗೂ ನಿಲ್ಲಿಸಲಾಗಿದೆ’
ಎಂದು ತಿಳಿಸಿದ್ದರು.

ಜಮ್ಮು, ಲೇಹ ಮತ್ತು ಶ್ರೀನಗರಕ್ಕೆ
ಹೋಗುತ್ತಿದ್ದ ವಿಮಾನಗಳನ್ನು ವಾಪಸ್‌ ಕಳುಹಿಸಲಾಗಿದೆ. ಚಂಡೀಗಢ, ಪಠಾನ್‌ಕೋಟ್‌, ಹಲ್ವಾರಾ ಮತ್ತು
ಬಟಿಂಡಾ ವಿಮಾನ ನಿಲ್ದಾಣಗಳಲ್ಲಿಯೂ ಹೈ ಅಲರ್ಟ್‌ ಘೋಷಿಸಲಾಗಿದೆ. ಚಂಡೀಗಢದಲ್ಲಿ ಕೆಲ ಕಾಲ ಸ್ಥಗಿತಗೊಂಡಿದ್ದ
ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಪುನರ್‌ ಆರಂಭಗೊಂಡಿದೆ.

ವಿಸ್ತಾರ ವಿಮಾನಯಾನ, ‘ಅಮೃತಸರ, ಶ್ರೀನಗರ
ಮತ್ತು ಜಮ್ಮುವಿನಿಂದ ಹೊರಡುವ ಮತ್ತು ಬರುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಟ್ವೀಟ್‌ನಲ್ಲಿ
ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos