4ನೇ ಶ್ರೀಮಂತೆಯಾದ್ರು ಈ ಮಹಿಳೆ

4ನೇ ಶ್ರೀಮಂತೆಯಾದ್ರು ಈ ಮಹಿಳೆ

. 5, ನ್ಯೂಸ್ ಎಕ್ಸ್ ಪ್ರೆಸ್: ಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ. ತಕ್ಷಣ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ವಿಶ್ವದ 4ನೇ ಶ್ರೀಮಂತ ಮಹಿಳೆಯಾಗಿದ್ದಾರೆ. ವಿಚ್ಛೇದನದ ನಂತ್ರ ಮೆಕೆಂಜಿಗೆ ಇ-ಕಾಮರ್ಸ್ ಕಂಪನಿ ಅಮೆಜಾನ್ ನ ಶೇಕಡಾ 4ರಷ್ಟು ಪಾಲು ಸಿಕ್ಕಿದೆ.

ಪ್ರಸ್ತುತ ಸಮಯದಲ್ಲಿ ಇದರ ಮೌಲ್ಯ 36.5 ಅರಬ್ ಡಾಲರ್ ಸುಮಾರು 2.52 ಲಕ್ಷ ಕೋಟಿ ರೂ. ಮೆಕೆಂಜಿಗೆ ಪಾಲು ನೀಡಿದ ನಂತರವೂ ಜೆಫ್ 114 ಅರಬ್ ಡಾಲರ್  ಸುಮಾರು 7.87 ಲಕ್ಷ ಕೋಟಿ ಯೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಜೆಫ್ ಬೆಜೋಸ್ ಹಾಗೂ ಮೆಕೆಂಜಿ ಈ ವರ್ಷ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 1994ರಲ್ಲಿ ಮೆಕೆಂಜಿ-ಬೆಜೋಸ್ ಮದುವೆಯಾಗಿತ್ತು. ಇವರಿಗೆ 4 ಮಕ್ಕಳಿವೆ. ಮೆಕೆಂಜಿ ಉಪನ್ಯಾಸಕಿಯಾಗಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 1992ರಲ್ಲಿ ಸಂದರ್ಶನದ ವೇಳೆ ಜೆಫ್ ಭೇಟಿಯಾಗಿತ್ತು. ಇಬ್ಬರ ಬಳಿ ಅಮೆಜಾನ್ ನ ಶೇಕಡಾ 16ರಷ್ಟು ಪಾಲಿತ್ತು. ಅದರಲ್ಲಿ ಶೇಕಡಾ 4ರಷ್ಟು ಪಾಲನ್ನು ಮೆಕೆಂಜಿಗೆ ನೀಡಲಾಗಿದೆ. ಈಗ ಬೆಜೋಸ್ ಬಳಿ ಶೇಕಡಾ 12ರಷ್ಟು ಷೇರಿದೆ.

 

ಫ್ರೆಶ್ ನ್ಯೂಸ್

Latest Posts

Featured Videos