ಶೂ ಕಳವು ,ಠಾಣೆ ಮೆಟ್ಟಿಲೇರಿದ ಉದ್ಯಮಿ

ಶೂ ಕಳವು ,ಠಾಣೆ ಮೆಟ್ಟಿಲೇರಿದ ಉದ್ಯಮಿ

ಚೆನ್ನೈ,ನ,18: ತಮಿಳುನಾಡಿನಲ್ಲಿ ಉದ್ಯಮಿಯೊಬ್ಬರು ಶೂಗಳು ಕಳೆದು ಹೋಗಿವೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.ವಿಚಿತ್ರ ಎನಿಸಿದರು ಇದು ನಿಜ. ಈ ದೂರಿನ ಬಗ್ಗೆ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಮನೆಯಲ್ಲಿ ಇಟ್ಟಿದ್ದ 10 ಜೊತೆ ಶೂಗಳು, ಚಪ್ಪಲಿಗಳು ಕಾಣೆಯಾಗಿದೆ ಎಂದು ಉದ್ಯಮಿ ದೂರು ನೀಡಿದ್ದಾರೆ.

ಅವೆಲ್ಲಾ ಬಹಳ ಬೆಲೆಬಾಳುವ ಶೂಗಳು. ಎಲ್ಲಾ ಸೇರಿ ಬರೋಬ್ಬರಿ 76 ಸಾವಿರ ಮೌಲ್ಯದ ಶೂಗಳು ಕಳೆದು ಹೋಗಿದೆ ಎಂದು ದೂರು ನೀಡಿದ್ದಾರೆ. ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಮನೆಯ ಅಕ್ಕಪಕ್ಕದ ಸಿಸಿಟಿವಿಗಳನ್ನು ಕೂಡ ಪರಿಶೀಲಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos