23 ವಿದೇಶಿ ತಳಿಯ ನಾಯಿಗಳು ಭಾರತದಲ್ಲಿ ನಿಷೇಧ..!

23 ವಿದೇಶಿ ತಳಿಯ ನಾಯಿಗಳು ಭಾರತದಲ್ಲಿ ನಿಷೇಧ..!

ಬೆಂಗಳೂರು: ಪ್ರಾಣಿ ಪ್ರಿಯರಿಗೆ ಶಾಕಿಂಗ್ ಅದೇಶವನ್ನು ನೀಡಲಾಗಿದೆ. ಭಾರತದಲ್ಲಿ ಇನ್ನು ಮುಂದೆ ಕೆಲವು ವಿದೇಶಿ ತಳಿಗಳ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ದೇಶಾದ್ಯಂತ ನಾಯಿಗಳಿಂದ ಜನರ ಮೇಲೆ ದಾಳಿ ಹಾಗೂ ವಿದೇಶಿ ತಳಿಗಳ ಅಕ್ರಮ ವ್ಯಾಪಾರ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪಿಟ್‌ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ಡಾಗ್‌, ಕಂಗಾಲ್‌, ರಷ್ಯನ್‌ ಶೆಫರ್ಡ್‌ ಸೇರಿದಂತೆ 23 ಬಗೆಯ ಅಪಾಯಕಾರಿ ವಿದೇಶಿ ಶ್ವಾನ ತಳಿಗಳನ್ನು ಕೇಂದ್ರ ಸರಕಾರ ನಿರ್ಬಂಧಿಸಿದೆ.

ಅವುಗಳ ಸಂತಾನ ಶಕ್ತಿ ಹರಣ ಮಾಡುವಂತೆಯೂ ಇದೇ ವೇಳೆ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರ ಕೆಲವರಿಗೆ ಬೇಸರ ತರಿಸಿದ್ದಂತೂ ನಿಜ. ಆದರೆ, ಈ ತಳಿಗಳನ್ನು ನಿಷೇಧ ಮಾಡಬೇಕು ಎನ್ನುವುದು ಬಹುಕಾಲದ ಬೇಡಿಕೆಯಾಗಿತ್ತು.ಪಿಟ್ಬುಲ್, ಟೆರಿಯರ್, ಅಮೆರಿಕನ್ ಬುಲ್ಡಾಗ್ , ರಾಟ್ವೀಲರ್ ಮತ್ತು ಮಾಸ್ಟಿಫ್ಸ್ ಸೇರಿದಂತೆ 23 ತಳಿಗಳನ್ನು ನಿಷೇಧ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅದಕ್ಕೆ ಮುಖ್ಯ ಕಾರಣ ಈ ನಾಯಿಗಳು ಕ್ರೂರ ಸ್ವಭಾವ ಹೊಂದಿದೆ ಎಂಬ ಕಾರಣಕ್ಕೆ.ಸಾಕು ಪ್ರಾಣಿಗಳಾಗಿ ಇರಿಸಲಾದ ಈ ಮೇಲಿನ ಕ್ರೂರ ತಳಿಯ ನಾಯಿಗಳ ಕಡಿತದಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ. ಅದಕ್ಕಾಗಿಯೇ ಅವುಗಳನ್ನು ನಿಷೇಧ ಮಾಡಲಾಗುತ್ತಿದೆ. ಇಂಥ ನಾಯಿಗಳನ್ನು ಸಾಕುವುದರಿಂದ ಮನುಷ್ಯನ ಜೀವನಕ್ಕೆ ಅಪಾಯ ಇದೆ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos