1930ರ ವಿಮಾನ ಪತನ 12 ಜನರ ಸಾವು

1930ರ ವಿಮಾನ ಪತನ 12 ಜನರ ಸಾವು

ಕೊಲೊಂಬಿಯಾ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: 1930ರ  ವಿಮಾನ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ಗಳ ಹಳೆವಿಮಾನ ಒಂದು ಪತನವಾಗಿದ್ದು ಮೇಯರ್ ಕುಟುಂಬ ಸೇರಿದಂತೆ 12 ಜನರು ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.

1930ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ಅಮೆರಿಕನ್ ನಿರ್ಮಿಸಿ ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ -3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ.

ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಪತಿ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ.

ವಿಮಾನ ಹಾರುತ್ತಿರುವಾಗ ಎಂಜಿನ್ ವೈಫಲ್ಯದಿಂದಾಗಿ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos