14 ಶಾಸಕರು ರಾಜೀನಾಮೆಗೆ ರೆಡಿ

14 ಶಾಸಕರು ರಾಜೀನಾಮೆಗೆ ರೆಡಿ

ಬೆಂಗಳೂರು, ಜು.06 : ಈಗಾಗಲೇ 8 ಮಂದಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ರಾಮಲಿಂಗಾ ರೆಡ್ಡಿ ಸೇರಿ ಮೈತ್ರಿ ಪಕ್ಷ 14 ಶಾಸಕರು ರಾಜೀನಾಮೆ ನೀಡುವ ಮಾತುಗಳು ಕೇಳಿ ಬಂದಿದ್ದವು. ರಮೇಶ್ ಜಾರಕಿಹೊಳಿ ಸೇರಿದಂತೆ ಒಟ್ಟು 8 ಮಂದಿ ರೆಬೆಲ್ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ರಾಜ್ಯಪಾಲರ ನಿವಾಸದ ಕಡೆ ಪ್ರಯಾಣ ಬೆಳೆಸಿದ್ದಾರೆ.
ಸರ್ಕಾರ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. 13 ಶಾಸಕರು ರಾಜೀನಾಮೆ ನೀಡುವ ಅನುಮಾನ ವ್ಯಕ್ತವಾಗಿತ್ತು. ವಿಧಾನಸೌಧಕ್ಕೆ ಬರೋಬ್ಬರಿ 15 ಶಾಸಕರು ಎಂಟ್ರಿ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಇತ್ತ ಶಾಸಕರು ವಿಧಾನಸೌಧಕ್ಕೆ ಎಂಟ್ರಿ ನೀಡುತ್ತಿದ್ದಂತೆಯೇ, ಅತ್ತ ಸ್ಪೀಕರ್ ರಮೇಶ್ ಕುಮಾರ್ ಹೊರ ಹೋಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos