ಅಂದರ್-ಬಾಹರ್ ಜೂಜಾಟದ ಅಡ್ಡೆಯ ಮೇಲೆ ದಾಳಿ: 8 ಜನರ ಬಂಧನ

ಅಂದರ್-ಬಾಹರ್ ಜೂಜಾಟದ ಅಡ್ಡೆಯ ಮೇಲೆ  ದಾಳಿ: 8 ಜನರ ಬಂಧನ

 ಬೆಂಗಳೂರು: ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆ
ಸರಹದ್ದಿನ ಕೆಂಗೇರಿ ರಿಂಗ್ ರಸ್ತೆ, ಯೂನಿವರ್ಸಿಟಿಯ ಸರ್ಕಲ್, ಮನೆ ನಂ.897/928 ರಲ್ಲಿ ಸುಮಾರು
7 ರಿಂದ 8 ಜನ ಹಣವನ್ನು ಪಣವಾಗು ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟವನ್ನು
ಆಡುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ
ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ.

ಜೂಜಾಟದಲ್ಲಿ ಭಾಗಿಯಾಗಿದ್ದ
ಕೃಷ್ಣ.ಟಿ.ಆರ್ ಬಿನ್ ರಾಮೇಗೌಡ,
(45) ನಾರಾಯಣ ಬಿನ್ ಹೊನ್ನಪ್ಪ,
(24) ವೆಂಕಟರಾಮರೆಡ್ಡಿ ಬಿನ್ ನಾರಾಯಣರೆಡ್ಡಿ, (40)
 ರಮೇಶ್.ಎಂ ಬಿನ್ ಮುನಿಸ್ವಾಮಿ,
(44)  ಪ್ರಭುದೇವ್
ಬಿನ್ ನಂಜುಂಡಪ್ಪ, (42)  ರಮೇಶ್.ಆರ್ ಬಿನ್ ಎಂ.ಎನ್.ರಾಜಪ್ಪ, (42 )  ಮಹಾದೇವ್
ಬಿನ್ ಚಿಕ್ಕೇಗೌಡ, (45)  ಮೋಹನ್‌ಕುಮಾರ್ ಬಿನ್  ಗೋವಿಂದಪ್ಪ, (53)  ಇವರುಗಳನ್ನು
ವಶಕ್ಕೆ ಪಡೆದು,  ಇವರಿದ
ಜೂಜಾಟಕ್ಕೆ ಸಂಬಂಧಿಸಿದಂತೆ  ಒಟ್ಟು
ನಗದು ಹಣ 52,200 ರೂ,  52 ಇಸ್ಪೇಟ್
ಎಲೆಗಳು, ಒಂದು ಕಂಬಳಿ ಇವುಗಳನ್ನು  ವಶಪಡಿಸಿಕೊಂಡಿದ್ದಾರೆ.
ಪ್ರಕರಣವು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರು ನಗರದ  ಅಲೋಕ್ ಕುಮಾರ್ ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು ಎಸ್.ಗಿರೀಶ್
ಐ.ಪಿ.ಎಸ್, ಇವರ ಮಾರ್ಗದರ್ಶನದಲ್ಲಿ, ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಪಿ.ಟಿ.ಸುಬ್ರಮಣ್ಯರವರ
ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಅಂಜನಕುಮಾರ ಮತ್ತು ಸಿಬ್ಬಂದಿ ರವಿಕುಮಾರ್, ಶ್ರೀನಿವಾಸ್,
ನಾಗರಾಜು ರವರು ಕಾರ್ಯಾಚಾರಣೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos