ಯಾದಗಿರಿಯಲ್ಲಿ ರೊಟ್ಟಿ ಜಾತ್ರೆ

ಯಾದಗಿರಿಯಲ್ಲಿ ರೊಟ್ಟಿ ಜಾತ್ರೆ

ಯಾದಗಿರಿ, ಜ. 16 : ಮಕರ ಸಂಕ್ರಾಂತಿಯ ದಿನ ಯಾದಗಿರಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಗಿದೆ. ಯಾದಗಿರಿ ತಾಲೂಕಿನ ಅಬ್ಬೆತುಮಕೂರು ಬಳಿ ಹರಿಯುವ ಭೀಮಾ ನದಿ ತಟದಲ್ಲಿ ಸಾವಿರಾರು ಭಕ್ತರು ರೊಟ್ಟಿ ಸವಿದಿದ್ದಾರೆ.
ಗ್ರಾಮದಲ್ಲಿರುವ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಶ್ರೀ ಗಂಗಾಧರ ಸ್ವಾಮೀಜಿಗಳು ಪ್ರತಿ ವರ್ಷ ಐದಾರು ಟ್ರ್ಯಾಕ್ಟರ್ ಸಜ್ಜೆ ರೊಟ್ಟಿ ಮಾಡಿಸುತ್ತಾರೆ. ಸಂಕ್ರಾಂತಿಯಂದು ಬರುವ ಭಕ್ತರು ಭೀಮಾ ನದಿಯಲ್ಲಿ ಸ್ನಾನ ಮಾಡಿ ಪಾಪ ಕಳೆದುಕೊಳ್ಳುತ್ತಾರೆ. ನಂತ್ರ ಹೊಸ ವರ್ಷಕ್ಕೆ ಎಲ್ಲರೂ ಒಂದೆ ಎಂಬಂತೆ ಯಾವುದೇ ಭೇದ ಭಾವವಿಲ್ಲದೆ ಸಾಮೂಹಿಕವಾಗಿ ಸಜ್ಜಿ ರೊಟ್ಟಿ ಊಟ ಮಾಡುತ್ತಾರೆ.
ಇದಕ್ಕೂ ಮೊದಲು ಗಂಗಾಧರ ಸ್ವಾಮೀಜಿಯವರು ತೆಪ್ಪೊತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ನಂತ್ರ ಭಕ್ತರೆಲ್ಲ ಸೇರಿ ಸಜ್ಜೆ ರೊಟ್ಟಿ, ಕಾಳು ಪಲ್ಲೆ, ಪುಂಡಿಪಲ್ಲೆ ಸೇರಿದಂತೆ ವಿವಿಧ ಖ್ಯಾದ್ಯಗಳನ್ನು ಸೇವಿಸುತ್ತಾರೆ. ಒಟ್ಟಿನಲ್ಲಿ ಸಂಕ್ರಾಂತಿಯನ್ನು ಇಲ್ಲಿ ರೊಟ್ಟಿ ಹಬ್ಬವೆಂದೆ ಹೇಳಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos