ವಿಶ್ವ ಔಷಧಿಕಾರರ ದಿನಾಚರಣೆ

ವಿಶ್ವ ಔಷಧಿಕಾರರ ದಿನಾಚರಣೆ

ಕಮಲನಗರ: ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಕಾರರ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡು ಹಿಡಿದು ರೋಗಿಗಳಿಗೆ ಸೂಕ್ತ ಪ್ರಮಾಣ ನೀಡುವಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗಾಯತ್ರಿ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಡಿ ಫಾರ್ಮಸಿ, ನರ್ಸಿಂಗ, ಪ್ಯಾರಾಮೇಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಔಷಧಿಕಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಔಷಧಿಕಾರರ ದಿನ ಆಚರಣೆ ಮಾಡಿದರೆ ಸಾಲದು. ಅದರ ಮಹತ್ವವನ್ನು ಅರಿತುಕೊಳ್ಳುವಂತೆ ಆಗಬೇಕು. ವೈದ್ಯರು ಮತ್ತು ರೋಗಿಗಳ ನಡುವೆ ಸೇತುವೆಯಾಗಿ ಔಷಧಿಕಾರರು ಕೆಲಸ ಮಾಡುತ್ತಾ ಇರುತ್ತಾರೆ. ಇದರ ಜೊತೆಗೆ ಅನೇಕ ಸಂದರ್ಭದಲ್ಲಿ ರೋಗಿಗಳಿಗೆ ಔಷಧಿಕಾರ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಾರೆ. ಔಷಧ ಸೇವನೆ ಕುರಿತು ತಿಳುವಳಿಕೆ ನೀಡುವ ಜೊತೆಗೆ ರೋಗಿಗಳ ಮನಸ್ಸು ಗೆಲ್ಲುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಡಾ. ಪ್ರೀತಿ ರೇಡ್ಡಿ ಮಾತನಾಡಿ, ಔಷಧಿಕಾರರ ಹುದ್ದೆ ಅತ್ಯಂತ ಕಷ್ಟಕರ. ವೈದ್ಯರು ರೋಗಿಗಳಿಗೆ ಸೂಚಿಸಿದ ಔಷಧ ನೀಡುವಾಗ ಸಣ್ಣ ತಪ್ಪು ಸಹ ಆಗಬಾರದು. ಇದನ್ನು ಗಮನದಲ್ಲಿ ಇರಿಸಿಕೊಂಡು ಔಷಧಿಕಾರರ ಸಲ್ಲಿಸಿಸುತ್ತಿರುವ ಸೇವೆ ಗಮನಾರ್ಹವಾದದ್ದು ಎಂದರು.

ಈ ವೇಳೆ ಪ್ರಾಚಾರ್ಯ ಸತೀಶ ಉದಬಾಳೆ, ಉಪನ್ಯಾಸಕರಾದ ಮಯೂರ ಪಾಟೀಲ್, ಆದಿತ್ಯ ಕಾಳೆ, ಕಾಲೇಜಿನ ಅಧ್ಯಕ್ಷ ಪ್ರೋ. ಸಂತೋಷ ಕಾರಬಾರಿ, ಕಾಲೇಜಿನ ಕಾರ್ಯದರ್ಶಿ ಸುನೀಲ ದೇಶಮುಖ, ಶಾಂತಕುಮಾರ ಬಿರಾದಾರ, ರಾಜಕುಮಾರ.ಪೋ.ಪಾಟೀಲ್, ಪ್ರಕಾಶ ಪಾಟೀಲ್, ರಾಚಪ್ಪಾ ಪಾಟೀಲ್, ದತ್ತಾತ್ರಿ ಕದಮ, ಕಾಲೇಜಿನ ಆಡಳಿತಾಧಿಕಾರಿ ಸಂಜಯ ಬಿಬಿನವರೆ, ಕಾಲೇಜಿನ ಕ್ಲರ್ಕ ಪ್ರೇಮಸಾಗರ ಬೆಂಬ್ರೆ, ಉಮಾಕಾಂತ ಮುಳೆ, ರವಿ ಪಾಟೀಲ್ ಸಾಕೋಳಕರ, ಪೂಜಾ ಮೇತ್ರೆ, ಮೋರೆ ವೈಷ್ಣವಿ, ಸ್ವಾಮಿ ಯಶಶ್ರೀ, ಗುಂದೆವಾಡ ಅನೀಕೇತ & ಮಠಪತಿ ಯೋಗೇಶ್ವರಿ, ಸೈಯ್ಯದ ಆಸೀಫ, ವಿದ್ಯಾರ್ಥಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos