ವಿಧವೆ ಅನುಮಾನಾಸ್ಪದ ಸಾವು

ವಿಧವೆ ಅನುಮಾನಾಸ್ಪದ ಸಾವು

ಮೈಸೂರು, ಫೆ.1: ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿಧವೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆ ಪಟ್ಟಣದಲ್ಲಿ ನಡೆದಿದೆ. ಸಣ್ಣದೇವಮ್ಮ ಮೃತ ಮಹಿಳೆ. ಘಟನೆ ನಡೆದ ಬಳಿಕ ಆಕೆಯ ಪ್ರಿಯಕರ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಸಿದ್ದಪ್ಪಾಜಿ ವಿವಾಹಿತನಾಗಿದ್ದು, ವಿಧವೆ ಮಹಿಳೆ ಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.ಹೆಚ್.ಡಿ. ಕೋಟೆ ಪಟ್ಟಣದ ವಿಶ್ವನಾಥಯ್ಯ ಕಾಲೋನಿಯ ಜಾರ್ಜ್ ವಠಾರದಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರು ತಿಂಗಳಿಂದ ಸಣ್ಣದೇವಮ್ಮ ಹಾಗೂ ಸಿದ್ದಪ್ಪಾಜಿ ವಠಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos