ವಿಜಯೇಂದ್ರ ಕುಟ್ಟಾ ಅಭಿನಯದ ಕೃಥ ಚಿತ್ರ ಬಿಡುಗಡೆ

ವಿಜಯೇಂದ್ರ ಕುಟ್ಟಾ ಅಭಿನಯದ ಕೃಥ ಚಿತ್ರ ಬಿಡುಗಡೆ

ಕೆ.ಆರ್.ಪುರ, ಜ. 25: ಕನ್ನಡ ಚಿತ್ರರಂಗದಲ್ಲಿ ಬೀಚಿನ ದಿನಗಳಲ್ಲಿ ಹೊಸಬರ ಹಾವಳಿ ಹೆಚ್ಚಾಗಿದ್ದು, ಪ್ರಪ್ರಥಮ ಬಾರಿಗೆ ನಿರ್ಮಾಪಕರಾಗಿ ಹಾಗೂ ನಾಯಕ ನಟನಾಗಿ ಅಭಿನಯಿಸಿರುವ ವಿಜಯೇಂದ್ರ ಕುಟ್ಟಾ ಹಾಗೂ ಚಿತ್ರ ನಟಿ ಮೇಘನ ಗೌಡ ಅವರು ಅಭಿನಯಿಸಿರುವ ಕೃಥ ಎಂಬ ಚಲನಚಿತ್ರವೂ ಕೆ.ಆರ್.ಪುರದ ಕೃಷ್ಣಾ ಚಿತ್ರ ಮಂದಿರದಲ್ಲಿ ಬಿಡುಗಡೆಯ ಪ್ರಥಮ ಪ್ರದರ್ಶನದಲ್ಲಿ ಚಿತ್ರ ತಂಡದೊಂದಿಗೆ ವೀಕ್ಷಣೆ ಮಾಡಿ ನಂತರ ತನ್ನ ಅನುಭವವನ್ನು ಮಾಧ್ಯಮಗಳಿಗೆ ನಟ ಪ್ರತಿಕ್ರಿಯೆ ನೀಡಿದರು.

ಕೃಥ ಎಂಬ ನೂತನ ಚಲನಚಿತ್ರವೂ ಎಲ್ಲಾ ಹೊಸ ಪ್ರತಿಭೆಗಳಿಂದ ಕೂಡಿ ಬಂದಿದ್ದು, ಸಾಂಸಾರಿಕ ಸುಂದರ ಚಲನಚಿತ್ರವಾಗಿ ಮೂಡಿಬಂದಿದೆ, ನೆನ್ನೆ ರಾಜ್ಯದಾದ್ಯಂತ ಬಿಡುಗಡೆ ಗೊಂಡು ಆದ್ದೂರಿ ಪ್ರದರ್ಶನ ಕಂಡಿದೆ ಎಂದು ನಾಯಕನಟ ವಿಜಯೇಂದ್ರ ಅಭಿಪ್ರಾಯ ತಿಳಿಸಿದರು. ಸಾರ್ವಜನಿಕರು ಕುಟುಂಬದೊಂದಿಗೆ ಚಿತ್ರ ಮಂದಿರಕ್ಕೆ ಬಂದು ಕೃಥ ಚಿತ್ರ ವೀಕ್ಷಣೆ ಮಾಡಿ ಆಶಿರ್ವದಿಸಬೇಕು ಎಂದು ಮನವಿ ಮಾಡಿದರು.

ಇದೇ ಸಮಯದಲ್ಲಿ ಸ್ಥಳೀಯ ಬಿಜೆಪಿ ಯುವ ಮುಖಂಡ ಸುಂದರ್ ಮಾತನಾಡಿ, ಕೃಥ ಎಂಬ ಚಲನಚಿತ್ರವೂ ಹೊಸ ಪ್ರತಿಭೆಗಳಿಂದ ಕೂಡಿದ್ದರೂ ಸಹಾ ಹಳೆ ಕಲಾವಿದರು ನಟಿಸಿದಂತೆ ಮೂಡಿ ಬಂದಿದ್ದು, ಪ್ರತಿ ಹಂತದಲ್ಲೂ ರಹಸ್ಯದಿಂದ ಕೂಡಿ ವೀಕ್ಷಕರ ಗಮನ ಸೆಳೆಯುವಂತೆ ಮೂಡಿ ಬಂದಿದೆ ಎಂದು ಹೇಳಿದರು. ಕನ್ನಡ ಅಭಿಮಾನಿಗಳು ಚಿತ್ರ ಮಂದಿರಕ್ಕೆ ಹೋಗಿ ಕೃಥ ಚಲನಚಿತ್ರವನ್ನು ವೀಕ್ಷಿಸಿ ಆಶಿರ್ವದಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗುರುರಾಜ್, ನಾಗೇಂದ್ರ, ಪ್ರವೀಣ್, ಮಾರತಹಳ್ಳಿ ರಮೇಶ್, ವಿನೋದ್ ಸೇರಿದಂತೆ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos