ಲಸಿಕಾ ಅಭಿಯಾನ

ಲಸಿಕಾ ಅಭಿಯಾನ

ಚಿಂಚೋಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲೂಕಾ “ಸ್ತ್ರೀ ಶಕ್ತಿ” ಒಕ್ಕೂಟ(ರಿ) ಚಿಂಚೋಳಿ ಆರೊಗ್ಯ ಇಲಾಖೆ ವತಿಯಿಂದ ಶುಕ್ರವಾರ ತಾಲೂಕಿನ ಗ್ರಾಮಗಳಾದ ಚಿಮ್ಮಾಯಿದ್ಲಾಯಿ, ಐ.ಪಿ ಹೊಸಳ್ಳಿ, ಸುಲೇಪೇಟ, ಅಣವಾರ ಪೆಂಚನಪಳ್ಳಿ ಮುಂತಾದ ಗ್ರಾಮಗಳಲ್ಲಿ ಕೊರೊನಾ ಮಾಹಾಮಾರಿ ತಡೆಗಟ್ಟಲು ಕಲ್ಯಾಣ ಕರ್ನಾಟಕ ಉತ್ಸವದ ಶುಭದಿನದಂದು ಲಸಿಕಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು. ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದರು ಚಿಮ್ಮಾಯಿದ್ಲಾಯಿ ಸ್ತ್ರೀ ಶಕ್ತಿ ಒಕ್ಕೊಟದ ಅದ್ಯಕ್ಷರಾದ ನರಸಮ್ಮ ಲಕ್ಷ್ಮಣ ಆವುಂಟಿ ರವರು ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕೊರೊನಾ ದಿಂದ ವಿಶ್ವವೆ ತಲ್ಲಣ ಗೊಂಡಿದ್ದು ಲಕ್ಷಾಂತರ ಜನರು ಕೊರೋನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಮುಂದಿನ ದಿನ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರವಹಿಸ ಬೇಕು ಎಂದರು.

ಈ ವೇಳೆ ಗಾ.ಪಂ ಅದ್ಯಕ್ಷರಾದ ರೇಣುಕಾ ಗುಂಡಪ್ಪ, ಅಂಗನವಾಡಿ ಮೆಲ್ವಿಚಾರಕಿಯರಾದ ಶಾರದಾ , ಗುಂಡಪ್ಪ ಅವರಾದಿ ರಾಜಕುಮಾರ ತಳವಾರ್, ಅಂಗನವಾಡಿ ಕಾರ್ಯ ಕರ್ತರು, ಸಾಹಾಯಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos