ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನಾವರಣ

ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನಾವರಣ

ಕೆ.ಆರ್.ಪುರ, ಡಿ . 07: ಹಬ್ಬಗಳೆಂದರೆ ಸದಾ ಸಂತಸ ಅನುಭವ ನೀಡುತ್ತವೆ, ಅದರಲ್ಲೂ ಕ್ರಿಸ್ಮಸ್ ಸಂಭ್ರಮ ಎಲ್ಲಾ ಹಬ್ಬಗಳಿಗಿಂತಲೂ ಉತ್ಸಾಹ ಭರಿತ ಹಾಗೂ ಸಂಗೀತ ಅನುಭವ ನೀಡುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ದೇಶದ ಅತಿದೊಡ್ಡ 75 ಅಡಿಗಳ ಎತ್ತರದ ಕ್ರಿಸ್ಮಸ್ ಟ್ರೀಯನ್ನು ಉದ್ಘಾಟಿಸಲಾಯಿತು.

ಕ್ರೈಸ್ತ ಭಾಂದವರು ಸೇರಿದಂತೆ ಎಲ್ಲಾ ಸಮುದಾಯದೊಂದಿಗೆ ಬೇಸುಗೆ ತರುವ ಹಬ್ಬವಾಗಿದ್ದು,  ಬೆಂಗಳೂರಿನಲ್ಲಿ ವಿನೂತನ ವಿಶೇಷವಾಗಿ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ನಗರದ ಬಹುತೇಕ ಕಡೆಗಳಲ್ಲಿ ನಕ್ಷತ್ರಗಳು ಮಿನುಗತೊಡಗುತ್ತವೆ, ಮಕ್ಕಳು, ಯುವಕರು, ವಯೋವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸಂಭ್ರಮದಿಂದ ಮತ್ತು ವರ್ಣರಂಜಿತ ಮಾರ್ಗಗಳ ಮೂಲಕ ಸಾಂತಾನನ್ನು ಬರಮಾಡಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ. ಸಾಂತಾ ಕ್ಲಾಸ್ ತಾತನನ್ನು ಸ್ವಾಗತಿಸುವಾಗ ಸಂಭ್ರಮದ ಬಣ್ಣಗಳು, ಗುಡೀಸ್ ಮತ್ತು ಸಾಕಷ್ಟು ಶುಭಾಶಯ ವಿನಿಮಯಗಳಾಗುತ್ತವೆ.

ಅದೇ ರೀತಿ, ಸಂಭ್ರಮದ ಹಬ್ಬಗಳು ಸಾಲಾಗಿ ಬಂದಿರುವ ಈ ಸಂದರ್ಭದಲ್ಲಿ, ಈ ಬಾರಿಯ ನಿಮ್ಮ ಕ್ರಿಸ್ಮಸ್ ಆಚರಣೆ ಸಂಭ್ರಮವನ್ನು ಒಂದು ಹೊಚ್ಚ ಹೊಸ ಹಂತಕ್ಕೆ ಕೊಂಡೊಯ್ಯಲು ಫೀನಿಕ್ಸ್ ಮಾರ್ಕೆಟ್ ಸಿಟಿ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.

ಇದೇ ವೇಳೆ “ ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರಿ ” ಅನಾವರಣ ಮಾಡಿದ್ದು, ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಫಿನಿಕ್ಸ್ ಮಾಲ್ ನಿರ್ದೇಶಕ ಗಜೇಂದ್ರ ಸಿಂಗ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos