ಟಾಮ್ ಲ್ಯಾಥಮ್ ಶತಕ

ಟಾಮ್ ಲ್ಯಾಥಮ್ ಶತಕ

ಹ್ಯಾಮಿಲ್ಟನ್, ನ. 29 : ಅತಿಥಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಆರಂಭದಲ್ಲೇ ನ್ಯೂಜಿಲೆಂಡ್ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ ಶತಕ ಸಿಡಿಸಿದ್ದಾರೆ.
ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಟಾಮ್ ಲ್ಯಾಥಮ್ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ.
54.3 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿದೆ. ಮಳೆಯಿಂದಾಗಿ ಟೀ ವಿರಾಮದ ಬಳಿಕದ ಸಂಪೂರ್ಣ ಪಂದ್ಯವು ರದ್ದುಗೊಂಡಿತ್ತು.ಕಿವೀಸ್ಗೆ ಆರಂಭದಲ್ಲೇ ಜೀತ್ ರವಲ್ (5) ರೂಪದಲ್ಲ ಆಘಾತ ಎದುರಾಗಿತ್ತು. ನಾಯಕ ಕೇನ್ ವಿಲಿಯಮ್ಸನ್ (4) ವಿಕೆಟ್ ಸಹ 39ಕ್ಕೆ ಎರಡು ವಿಕೆಟ್ ಕಳೆದುಕೊಂಡ ಕಿವೀಸ್ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ಟಾಮ್ ಲ್ಯಾಥಮ್ ಹಾಗೂ ಅನುಭವಿ ರೋಸ್ ಟೇಲರ್ ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾದರು. ಇವರಿಬ್ಬರು ಮೂರನೇ ವಿಕೆಟ್ಗೆ 116 ರನ್ಗಳ ಮಹತ್ವದ ಜತೆಯಾಟ ನೀಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇನ್ನೊಂದೆಡೆ ದಿಟ್ಟ ಹೋರಾಟ ನೀಡಿದ ಲ್ಯಾಥಮ್, ಅಮೋಘ ಶತಕ ಸಾಧನೆ ಮಾಡಿದರು. 164 ಎಸೆತಗಳನ್ನು ಎದುರಿಸಿರುವ ಲ್ಯಾಥಮ್ 15 ಬೌಂಡರಿಗಳಿಂದ 101 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಹೆನ್ರಿ ನಿಕೋಲಸ್ (5*) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos