ಇಂದು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ

ಇಂದು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ

ನವದೆಹಲಿ, ಜ. 20: ರಾಜಧಾನಿಯ ತಾಲಕಟೋರ ಸ್ಟೇಡಿಯಂನಲ್ಲಿ ಇಂದು  ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಯಕ್ತಿಕವಾಗಿ ಬಹಳ ಪ್ರಿಯವೆನಿಸಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ 3ನೇ ಅವತರಣಿಕೆ ಇಂದು ನಡೆಯುತ್ತಿದೆ.  ಪರೀಕ್ಷಾ ಒತ್ತಡಗಳನ್ನು ನಿಭಾಯಿಸುವ ಬಗ್ಗೆ ಪ್ರಧಾನಿ ತಮ್ಮ ಅನುಭವಯುಕ್ತ ಸಲಹೆಗಳನ್ನು ನೀಡಲಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ಧಾರೆ. ಕರ್ನಾಟಕದಿಂದ ವಿವಿಧ ಜಿಲ್ಲೆಗಳಿಂದ ಆಯ್ದ 42 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಾಗುತ್ತಿದೆ. ಅನೇಕ ಕಡೆ ಶಾಲೆಗಳಲ್ಲಿ ಈ ಕಾರ್ಯಕ್ರಮದ ನೇರ ವೀಕ್ಷಣೆಯ ವ್ಯವಸ್ಥೆಯನ್ನೂ ಕಲ್ಪಿಸುವ ಸಾಧ್ಯತೆ ಇದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಡಿಸೆಂಬರ್ ತಿಂಗಳಲ್ಲಿ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ವಿಚಾರಗಳ ಬಗ್ಗೆ ಪ್ರಬಂಧ ಮಂಡನೆಯ ಸ್ಪರ್ಧೆ ಅಯೋಜಿಸಿತ್ತು. MyGov.in ವೆಬ್ಸೈಟ್ನಲ್ಲಿ ಇದಕ್ಕೆ ದೇಶಾದ್ಯಂತ 3 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿಕೊಂಡರು. ಅವರಲ್ಲಿ 2.6 ಲಕ್ಷ ಮಕ್ಕಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಹಿಂದಿನ ವರ್ಷದಲ್ಲಿ ಪಾಲ್ಗೊಂಡಿದ್ದವರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಈ ವರ್ಷ ಮಕ್ಕಳಿಂದ ಸ್ಪಂದನೆ ಸಿಕ್ಕಿತೆನ್ನಲಾಗಿದೆ.

ಹಾಗೆಯೇ, ಪರೀಕ್ಷೆಗೆ ಸಂಬಂಧಿಸಿದ ಥೀಮ್ಗಳನ್ನಾಧರಿಸಿ ಪೇಂಟಿಂಗ್ ಮತ್ತು ಪೋಸ್ಟರ್ಗಳಿಗೂ ಆಹ್ವಾನ ನೀಡಲಾಗಿತ್ತು. ಒಟ್ಟು 750 ಕೃತಿಗಳು ಬಂದವು. ಇವುಗಳ ಪೈಕಿ ಅತ್ಯುತ್ತಮವೆನಿಸಿರುವ 50 ಅನ್ನು ಆರಿಸಲಾಗಿದ್ದು, ಇಂದು ತಾಲಕಟೋರಾ ಸ್ಟೇಡಿಯಂನಲ್ಲಿ ಪ್ರದರ್ಶನಗೊಳ್ಳಲಿವೆ.

 

ಫ್ರೆಶ್ ನ್ಯೂಸ್

Latest Posts

Featured Videos