ಇಂದು ನ್ಯೂಜಿಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯ

ಇಂದು ನ್ಯೂಜಿಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯ

ವೆಲ್ಲಿಂಗ್ಟನ್, ಜ. 31: ನ್ಯೂಜಿಲೆಂಡ್ ವಿರುದ್ಧದ 4ನೇ T20 ಪಂದ್ಯದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಲಿದೆ. 5 ಪಂದ್ಯಗಳ T20 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾಕ್ಕೆ, ಇಂದಿನ ಪಂದ್ಯ ಔಪಚಾರಿಕವಾಗಿದೆ. ವೆಲ್ಲಿಂಗ್ಟನ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎಕ್ಸ್ಪೆರಿಮೆಂಟ್ಗೆ ಮುಂದಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ವಾಶಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ನವ್ದೀಪ್ ಸೈನಿ ಕಣಕ್ಕಿಳಿಯಲಿದ್ದಾರೆ. ಮತ್ತೊಂದೆಡೆ ತವರಿನಲ್ಲಿ T20 ಪಂದ್ಯ ಸರಣಿ ಸೋತಿರುವ ನ್ಯೂಜಿಲೆಂಡ್, ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡಲು ಹವಣಿಸುತ್ತಿದೆ. ಅಷ್ಟೇ ಅಲ್ಲ..! ಸರಣಿಯಲ್ಲಿ ವೈಟ್ವಾಶ್ ಭೀತಿಯಿಂದ ತಪ್ಪಿಸಿಕೊಳ್ಳಲು, ಹೋರಾಟ ನಡೆಸಬೇಕಾಗಿದೆ. ಆದ್ರೆ ಕೇನ್ ವಿಲಿಯಮ್ಸನ್ ಗಾಯದಿಂದ ಪಂದ್ಯಕ್ಕೆ ಅಲಭ್ಯರಾಗಿರೋದು, ಕಿವೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಲಿಯಮ್ಸನ್ ಅಲಭ್ಯತೆಯಲ್ಲಿ ವೇಗಿ ಟಿಮ್ ಸೌಥಿ, ನ್ಯೂಜಿಲೆಂಡ್ ತಂಡವನ್ನ ಮುನ್ನಡೆಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos