ಇಂದು ಮತ್ತು ನಾಳೆ ಆರ್‌ಸಿಯು ವಲಯ ಮಟ್ಟದ ಕಬಡ್ಡಿ ಟೂರ್ನಿ

ಇಂದು ಮತ್ತು ನಾಳೆ ಆರ್‌ಸಿಯು ವಲಯ ಮಟ್ಟದ ಕಬಡ್ಡಿ ಟೂರ್ನಿ

ಮೂಡಲಗಿ, ಫೆ. 19: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಆತಿಥ್ಯದಲ್ಲಿ 2019-20ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ ಕಾಲೇಜುಗಳ 4ನೇ ವಲಯ ಮಟ್ಟದ ಪುರುಷರ ಕಬಡ್ಡಿ ಟೂರ್ನಿಯನ್ನು ಫೆ. 19 ಮತ್ತು 20ರಂದು ಏರ್ಪಡಿಸಿರುವರು.

ಫೆ. 19ರಂದು ಬೆಳಿಗ್ಗೆ 10ಕ್ಕೆ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಅಧ್ಯಕ್ಷತೆಯಲ್ಲಿ ಸಿಪಿಐ ವೆಂಕಟೇಶ ಮುರನಾಳ ಟೂರ್ನಿ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಶಿರೂರಿನ ಎಂ.ಎಸ್. ರಡ್ಢೇರ, ಕೆಇಬಿ ಶಾಖಾಧಿಕಾರಿ ಪಿ.ಆರ್. ಯಡಹಳ್ಳಿ ಭಾಗವಹಿಸುವರು.

ಬಹುಮಾನ ವಿತರಣೆ: ಫೆ. 20ರಂದು ಮಧ್ಯಾಹ್ನ 12ಕ್ಕೆ ಜರುಗುವ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರವಹಿಸುವರು, ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಜಗದೀಶ ಗಸ್ತಿ, ಬಾಗಲಕೋಟದ ಎಸ್.ಎಫ್. ಬಾರಡ್ಡಿ, ದೀಪಕ ಹರ್ದಿ ಭಾಗವಹಿಸುವರು. ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 25ಕ್ಕೂ ಅಧಿಕ ಪದವಿ ಕಾಲೇಜುಗಳ ತಂಡಗಳು ಭಾಗವಹಿಸುತ್ತವೆ ಎಂದು ಪ್ರಾಚಾರ್ಯ ಎಂ.ಕೆ. ಕಂಕಣವಾಡಿ ತಿಳಿಸಿರುವರು.

 

 

ಫ್ರೆಶ್ ನ್ಯೂಸ್

Latest Posts

Featured Videos