ತಾಯಿ ಇಲ್ಲ, ತಂದೆ ಇದ್ದರೂ ಇಲ್ಲ, ಹಾಳು ಮನೆಯೇ ಗತಿ

ತಾಯಿ ಇಲ್ಲ, ತಂದೆ ಇದ್ದರೂ ಇಲ್ಲ, ಹಾಳು ಮನೆಯೇ ಗತಿ

ಸಕಲೇಶಪುರ, ನ. 26:  ತಂದೆಗಿಂತ ತಾಯಿ ಇರಬೇಕು ಎನ್ನುತ್ತದೆ ಸಮಾಜ. ಹೌದು ಎನ್ನುವಂತಹ ಘಟನೆಗಳು ಆಗಾಗ ನಮ್ಮ ಕಣ್ಣಿಗೆ ಕಂಡು ಬರುತ್ತವೆ. ಕೆಲ ಘಟನೆಗಳಲ್ಲಿ ತಂದೆ ತಾಯಿಯಾಗಿಯೂ ಮಕ್ಕಳನ್ನು ಸಲಹುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಸಕಲೇಶಪುರ ತಾಲೂಕಿನ ಹೆತ್ತೂರಿನ ತಾಯಿಯಿಲ್ಲದ ತಬ್ಬಲಿ ಹೆಣ್ಣು ಮಕ್ಕಳಿಬ್ಬರ ಕರುಣಾಜನಕ‌ ಸ್ಥಿತಿ ಹೇಳತೀರದಾಗಿದೆ.

ಆ ದೇವರು ಇರುವಾಗ ಯಾರೂ ಅನಾಥರಲ್ಲ ಎನ್ನುತ್ತದೆ ಆಧ್ಯಾತ್ಮ. ಆದರೆ ಈ ಇಬ್ಬರು ಹೆಣ್ಣುಮಕ್ಕಳು ಅನಾಥರು.

ಹಿರಿಯವಳು ರೋಸಿ ಹತ್ತನೇ ತರಗತಿ. ಆಕೆ ತಂಗಿ ಶೀಲಾ ಆರನೇ ತರಗತಿ.

ಹತ್ತು ವರ್ಷದ ಹಿಂದೆ ತಾಯಿ ಕಳೆದುಕೊಂಡ ಮಕ್ಕಳು, ಕುಡುಕ ತಂದೆಯಿಂದ ನಿರ್ಲಕ್ಷ್ಯಿತರಾಗಿ ಬೀದಿ ಬದಿಯ ಬಾಗಿಲು ಕಿಟಕಿಯಿಲ್ಲದ, ವಿದ್ಯುತ್ ಸಂಪರ್ಕ ಇಲ್ಲದ ಕಸದ ರಾಶಿ ನಡುವಿನ ಪಾಳುಬಿದ್ದ ಸರ್ಕಾರಿ ಕಟ್ಟಡದಲ್ಲಿ ಬದುಕುತ್ತಿದ್ದಾರೆ. ಬೆಳೆದ ಹೆಣ್ಣು ಮಕ್ಕಳಿಬ್ಬರ ಈ ಸ್ಥಿತಿ ಹೇಳತೀರದಾಗಿದೆ.

ಶಾಲೆಯ ಬಿಸಿಯೂಟವೇ ಮಕ್ಕಳಿಬ್ಬರು ಮೃಷ್ಟಾನ್ನ ಭೋಜನ. ಶಾಲೆಗೆ ರಜೆ ಇದ್ದರೆ ತಣ್ಣೀರು ಬಟ್ಟೆಯೇ ಗತಿ ಎನ್ನುವಂತಾಗಿದೆ.

ಇಬ್ಬರೂ ಓದಿನಲ್ಲಿ ಮುಂದು. ಆದರೆ ಅವಕಾಶವಿಲ್ಲ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಇಬ್ಬರನ್ನೂ ಹಾಸ್ಟೆಲ್ ಗೆ ಸೇರಿಸಿಕೊಂಡು ಆಶ್ರಯ ನೀಡಲಿ ಎಂಬುದು ಜನರೇ ಆಗ್ರಹವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos