ರಾತ್ರೋ ರಾತ್ರಿ ದೇವಸ್ಥಾನ  ಹುಂಡಿ ಕಳ್ಳತನ

ರಾತ್ರೋ ರಾತ್ರಿ ದೇವಸ್ಥಾನ  ಹುಂಡಿ ಕಳ್ಳತನ

ತುಮಕೂರು, ಡಿ. 2:  ರಾತ್ರಿಯಲ್ಲಿ ಎರಡು ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕಯ್ಯನಪಾಳ್ಯ ಮತ್ತು ಲಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಜಿಲ್ಲೆಯ ಚಿಕ್ಕಯ್ಯನಪಾಳ್ಯ ಗ್ರಾಮದಲ್ಲಿರುವ ಶ್ರೀ ಲಕ್ಷೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮತ್ತು ಲಕ್ಕೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಾರಮ್ಮ ದೇವಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಕಳ್ಳರ ಗುಂಪು ಸರಣಿ ಕಳ್ಳತನ ಮಾಡಿದ್ದು, ದೇವಸ್ಥಾನದ ಹುಂಡಿಗಳನ್ನ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.

ಶ್ರೀ ಲಕ್ಷೀ ವೆಂಕಟೇಶ್ವರ ಸ್ವಾಮಿ ದೇವಾಲಯ ಹುಂಡಿ ಒಡೆದು ಸುಮಾರು 2 ಲಕ್ಷ ರೂ.ಗೂ ಹೆಚ್ಚು ಹಣ ಕಳ್ಳತನ ನಡೆಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಶ್ರೀ ಮಾರಮ್ಮ ದೇವಿ ದೇವಸ್ಥಾನದಲ್ಲಿ ಹುಂಡಿ ಒಡೆದು ಹಣವನ್ನು ದೋಚಿದ್ದಾರೆ.

ಎರಡು ಗ್ರಾಮದಲ್ಲಿ ಒಂದೇ ದಿನ ಕಳ್ಳತನ ನಡೆದಿದ್ದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಮೊದಲೇ ಚಿರತೆ ಕಾಟದಿಂದ ನಿದ್ದೆಗೆಟ್ಟಿರುವ ಈ ಗ್ರಾಮಗಳಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿರುವುದು ಈ ಭಾಗದ ಗ್ರಾಮಸ್ಥರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos