ಉದ್ಯಮದ ಅನುಭವ ತೃಪ್ತಿಕರವಾಗಿದೆ

ಉದ್ಯಮದ ಅನುಭವ ತೃಪ್ತಿಕರವಾಗಿದೆ

ಬೆಂಗಳೂರು, ಮಾ. 04: ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಏನು ಕಡಿಮೆ ಇಲ್ಲ. ಕೆಲವೊಬ್ಬ ನಟಿಯರು ತಮ್ಮ ಅಭಿನಯದ ಮೂಲಕ ಅಭಿಮಾನ ಮನ ಗೆಲ್ಲುತ್ತಾರೆ.

ಎಸ್. ನಾರಾಯಣ್ ನಿರ್ದೇಶನದ ಚೆಲುವಿನ ಚಿಲಿಪಿಲಿ ಚಿತ್ರದ ಮೂಲಕ ಪಡ್ಡೆ ಹುಡುಗರ ಮನ ಕದ್ದಿರುವ ರೂಪಿಕಾ ಅವರು ಬೆಳ್ಳಿತೆರೆಯ ಮೇಲೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಹೌದು, ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚೆಲುಪಿಲಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡ ರೂಪಿಕಾಗೆ ಹೆಸರು ತಂದುಕೊಟ್ಟಿದ್ದು ‘ಕಾಲ್ಗೆಜ್ಜೆ’ ಚಿತ್ರ. ಇತ್ತೀಚೆಗೆ ಅವರ ‘ಥರ್ಡ್ ಕ್ಲಾಸ್’ ಚಿತ್ರ ಬಿಡುಗಡೆಯಾಗಿತ್ತು. ಈ 10 ವರ್ಷದ ಸುದೀರ್ಘ ಪಯಣದಲ್ಲಿ ರೂಪಿಕಾ ಯಾವುದೇ ಸ್ಟಾರ್ ನಟರ ಜತೆಗೆ ನಟಿಸಿಲ್ಲ. ಹಾಗೆಂದು ಅವರು ಚಿತ್ರರಂಗದಿಂದಲೂ ಮರೆಯಾಗಿಲ್ಲ. ಸಿನಿಮಾಗಳಲ್ಲಿ ನಟಿಸುತ್ತಲೇ, ನೃತ್ಯಗಾತಿಯಾಗಿ ತಮ್ಮ ಹವ್ಯಾಸವನ್ನು ಮುಂದುವರಿಸುತ್ತಲೇ ಅಸ್ತಿತ್ವ ಪ್ರದರ್ಶನ ಮಾಡುತ್ತಿದ್ದಾರೆ.

ಉದ್ಯಮದಲ್ಲಿ ನನ್ನ ಬಗ್ಗೆ ಯಾರೂ ಕೆಟ್ಟ ಮಾತನ್ನಾಡುವುದಿಲ್ಲ. ನನ್ನ ಕುರಿತು ಯಾವುದೇ ನಕಾರಾತ್ಮಕ ಅಭಿಪ್ರಾಯಗಳಿಲ್ಲ. ಕೊಟ್ಟ ಪಾತ್ರವನ್ನು ನೀಟಾಗಿ ಮಾಡುತ್ತಾಳೆ ಎಂಬ ನಂಬಿಕೆ ಚಿತ್ರರಂಗಕ್ಕೆ ಇದೆ. ಸ್ಟಾರ್‌ಗಳ ಜತೆಗೆ ನಟಿಸಬೇಕು, ದೊಡ್ಡ ಹಿಟ್ ನೀಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗೆಂದು ಅದು ಸಿಗದೆ ಇರುವುದಕ್ಕೆ ಬೇಸರವಿಲ್ಲ. ಅದು ನನಗೆ ಹಿನ್ನಡೆಯೂ ಆಗಿಲ್ಲ. ಖುಷಿ ಕೊಡುವ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದೇನೆ.

ಪ್ರಭಾವಿ ಹಿನ್ನೆಲೆಯಿಲ್ಲದೆ ಬಂದವಳು ಚಿತ್ರರಂಗಕ್ಕೆ ಬರುವ ಅನೇಕರಿಗೆ ಒಂದು ಹಿನ್ನೆಲೆ ಇರುತ್ತದೆ. ಸಿನಿಮಾ ಕುಟುಂಬ ಅಥವಾ ಪ್ರಭಾವಿ ವಲಯದಿಂದ ಬಂದವರು ಇರುತ್ತಾರೆ. ಆದರೆ ನನಗೆ ಅಂತಹ ಹಿನ್ನೆಲೆಯಿಲ್ಲ. ನಾನು ಕಲೆಯ ಮೂಲಕವೇ ಬಂದವಳು. ಕಠಿಣ ಪರಿಶ್ರಮದಿಂದ ಉದ್ಯಮಕ್ಕೆ ಬಂದ ಬಳಿಕವೇ ಎಲ್ಲವನ್ನೂ ಕಲಿತೆ. ನನ್ನ ಪ್ರತಿಭೆಯನ್ನು ರೂಪಿಸಿಕೊಂಡೆ. ಈ ಅವಧಿಯಲ್ಲಿ ‘ಗೆಜ್ಜೆ’ ಎಂಬ ನೃತ್ಯ ಸಂಸ್ಥೆ ಕಟ್ಟಿ ನೃತ್ಯ ಹೇಳಿಕೊಡುತ್ತಿದ್ದೇನೆ. ಅದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ.

ಕೀರ್ತಿ ಸುರೇಶ್ಗೆ ಹೋಲಿಕೆ ತೆಲುಗಿನಲ್ಲಿಯೂ ಅವಕಾಶಗಳು ಬಂದಿವೆ. ಢಮರುಗಂ ಗಣೇಶ್ ಅವರೊಂದಿಗೆ ‘ಧಾಡಿ’ ಹಾಗೂ ‘2+1’ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಅಲ್ಲಿ ಕೂಡ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಸ್ತ್ರೀ ಪ್ರಧಾನ ಚಿತ್ರಗಳಲ್ಲದೆ ಇದ್ದರೂ ನಾಯಕರಿಗೆ ಸಮಾನವಾದ ಪಾತ್ರಗಳು ಸಿಗಬೇಕು ಎನ್ನುವುದು ನನ್ನ ಆಸೆ ಎನ್ನುತ್ತಾರೆ ನಟಿ ರೂಪಿಕಾ.

 

ಫ್ರೆಶ್ ನ್ಯೂಸ್

Latest Posts

Featured Videos