ಸರ್ಕಾರ ವಿರುದ್ಧ ರೇವಣ್ಣ ಸಿಡಿಮಿಡಿ

ಸರ್ಕಾರ ವಿರುದ್ಧ  ರೇವಣ್ಣ ಸಿಡಿಮಿಡಿ

ಹಾಸನ,ಡಿ. 24 : ಮಂಗಳೂರಿನಲ್ಲಿ ಇಬ್ಬರು ಅಮಾಯಕರನ್ನು ಪೊಲೀಸರು ಪ್ರಾಣ ಹಾನಿ ಮಾಡಿದ್ದಾರೆ. ಒಬ್ಬ ಹುಡುಗ ಪಿಹೆಚ್ಡಿ ರ್ಯಾಂಕ್ ವಿದ್ಯಾರ್ಥಿ, ಯಾಕೇ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತಿಲ್ಲ. ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸರ್ಕಾರ ವಿರುದ್ಧ ಸಿಡಿಮಿಡಿಗೊಂಡರು.
ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವಾಗ ಪೊಲೀಸರು ಇಬ್ಬರ ಯುವಕರ ಮೇಲೆ ಗೋಲಿಬಾರ್ ಮಾಡಿದ್ದರು. ಈ ಬಗ್ಗೆ ಮಾತನಾಡಿ, ಇಬ್ಬರ ಪ್ರಾಣಹಾನಿಯ ಬಗ್ಗೆ ಉನ್ನತ ಮಟ್ಟದ ನ್ಯಾಯಧೀಶರಿಂದ ತನಿಖೆ ಮಾಡಿಸಬೇಕು. ಆಗ ಅದರ ಸತ್ಯಾ ಸತ್ಯ ಹೊರಬಿಳುತ್ತದೆ ಎಂದರು.
ಅಂತೆಯೇ ಮಾತನಾಡಿ, ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಇದ್ದಾರೆ.

ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಇದನ್ನು ಜಾರಿಗೆ ತರಬಾರದು ಎಂದು ರೇವಣ್ಣ ಆಗ್ರಹಿಸಿದರು. ಇನ್ನು ಮಂಗಳೂರು ಗಲಾಟೆ ಪ್ರಕರಣದ ವಿಡೀಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿ, ಯಾರು ಕಲ್ಲು ಹೊಡೆದಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಿ. ಆದರೆ, ಇನ್ನುವರೆಗೂ ಗೋಲಿಬಾರ್ ಮಾಡಿ ಎಂದು ಪೊಲೀಸರು ಹೇಳಿರುವ ವಿಡೀಯೋ ಬಗ್ಗೆ ಏಕೆ ಕ್ರಮ ತೆಗೆದುಕೊಂಡಿಲ್ಲ. ಹಾಗದರೆ ಸಿಎಂ ಯಡಿಯ್ಯೂರಪ್ಪ ಏನು ಮಾಡುತ್ತಿದ್ದಾರೆ ಎಂದು ಅವರು ಸಿಎಂನ ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos