ವಿಶ್ವ ದಾಖಲೆ ಬರೆದ ಕ್ರೀಡೆ ಹಾಗೂ ಯೋಗ ಹಬ್ಬ

ವಿಶ್ವ ದಾಖಲೆ ಬರೆದ ಕ್ರೀಡೆ ಹಾಗೂ ಯೋಗ ಹಬ್ಬ

ಕೆ.ಆರ್.ಪುರಂ, ಡಿ. 05: ನಗರದ ಕೆ.ಆರ್.ಪುರಂನ ಶ್ರೀ ಚೈತನ್ಯ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ 36ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವದಾಖಲೆಯ ಯೋಗ ಹಬ್ಬ ನಡೆಯಿತು.

ವಿಶ್ವದಾಖಲೆಯ ಹಬ್ಬವನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ಗೋಪಣ್ಣ ಸತ್ಯನಾರಾಯಣರಾವ್ ಹಾಗೂ ಝಾನ್ಸಿ ರಾವ್ ರವರಿಗೆ ಅರ್ಪಿಸಲಾಯಿತು.

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ವಿವಿದ ರಾಜ್ಯಗಳಾದ ಕರ್ನಾಟಕ, ಆಂಧ್ರರ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ಎಲ್ಲ ಶಾಖೆಗಳ  ಒಂದು ಲಕ್ಷ ನಲವತ್ತೆರಡು ಸಾವಿರ ವಿದ್ಯಾರ್ಥಿಗಳು ಯೋಗ ಹಬ್ಬದಲ್ಲಿ ಏಕಕಾಲದಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಏಕ ಕಾಲದಲ್ಲಿ 399 ಶಾಲೆಗಳ 190 ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡಿದರು.

ಕೆ.ಆರ್.ಪುರಂ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯ 1290 ವಿದ್ಯಾರ್ಥಿಗಳು ಕ್ರೀಡೆ ಹಾಗೂ ಯೋಗದಲ್ಲಿ ಪಾಲ್ಗೊಂಡಿದ್ದರು. ವಿವಿಧ ರೀತಿಯ 45 ಆಸನಗಳನ್ನು ಪ್ರದರ್ಶಿಸುವ ಮೂಲಕ ತನ್ಮಯತೆ ಮೆರೆದರು. ಯೋಗ ಹಬ್ಬದ ವಿಶೇಷ ರಾಯಬಾರಿಯಾಗಿ ಲೆಬನಾನ್ ನ ಎಲೈಟ್ ವರ್ಡ್ ರೆಕಾರ್ಡ್ಸ್ ಸಂಸ್ಥೆಯ ರಾಭಿ ಬಾಲಾ ಬಾಕಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಚೈತನ್ಯ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸತ್ಯ ಶ್ರೀ ಗುಪ್ತ, ಶ್ರೀ ಚೈತನ್ಯ ಬೆಂಗಳೂರು ವಿಭಾಗದ ಸಹಾಯಕ ವ್ಯವಸ್ಥಾಪಕರಾದ ಡಾ.ಹರಿಕೃಷ್ಣಾರೆಡ್ಡಿ, ಪ್ರಾಂಶುಪಾಲರಾದ ಶ್ರೀ ಮತಿ ಅನುಪಮ, ದೈಹಿಕ ಶಿಕ್ಷಕರು ಹಾಗೂ ಮತ್ತಿತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos