ಸುಪ್ರೀಂ ನತ್ತ ಶಿವಸೇನೆ

ಸುಪ್ರೀಂ ನತ್ತ ಶಿವಸೇನೆ

ನವದೆಹಲಿ,ನ. 12: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ಮಹಾರಾಷ್ಟ್ರ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂ ನತ್ತು ಮುಖ ಮಾಡಿದೆ.

ಸರ್ಕಾರ ರಚನೆಗೆ ರಾಜ್ಯಪಾಲರು ಬಿಜೆಪಿಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದರು. ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಬೆಂಬಲ ಪತ್ರ ಪಡೆಯಲು ಮೂರು ದಿನಗಳ ಕಾಲಾವಕಾಶ ಕೋರಲಾಗಿತ್ತು. ಆದರೆ 24 ಗಂಟೆ ಕಾಲಾವಕಾಶ ನೀಡಿದರು ಎಂದು ಆರೋಪಿಸಿದೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುತ್ತಿದ್ದಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಜೊತೆ ಕಾನೂನು ಹೋರಾಟದ ಚರ್ಚೆ ನಡೆಸಿದ್ದು, ಶಿವಸೇನೆ ಪರವಾಗಿ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos