ಕಾಮುಕನಿಂದ ಕ್ಯಾಬ್ ನಲ್ಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಕಾಮುಕನಿಂದ ಕ್ಯಾಬ್ ನಲ್ಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು, ಜ. 21: ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ಕೊಲೆ ಸುಲಿಗೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಹೌದು, ಬೆಂಗಳೂರು ನಗರದಲ್ಲಿ ವಿದೇಶಿ ಯುವತಿ ಒಬ್ಬಳು ಬೆಂಗಳೂರು ನಗರದಲ್ಲಿ ಕಾಸಗಿ ಕ್ಯಾಬ್ ಚಾಲಕ ಮತ್ತು ಅವನ ಸ್ನೇಹಿತರು ಸೇರಿ ಯುವಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ.

25 ವರ್ಷದ ವಿದೇಶಿ ಯುವತಿ ಮೇಲೆ ಕ್ಯಾಬ್ ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರು ಬೆತ್ತಲೆಯಾಗಿದ್ದ ಆಕೆಯನ್ನು ಕಾರ್ ನಿಂದ ಹೊರದಬ್ಬಿ ಪರಾರಿಯಾಗಿದ್ದಾರೆ.

ಉಗಾಂಡ ಮೂಲದ 25 ವರ್ಷದ ಸಂತ್ರಸ್ತ ಯುವತಿ ದೆಹಲಿಯಿಂದ ಬೆಂಗಳೂರಿಗೆ ಕಿಡ್ನಿ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಂದಿದ್ದಾರೆ. ಆಕೆ ಕಮ್ಮನಹಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜನವರಿ 16 ರಂದು ಸ್ನೇಹಿತರ ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದಾಳೆ. ಸ್ಥಳಕ್ಕೆ ಬಂದಿದ್ದ ಕ್ಯಾಬ್ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದಾನೆ.

ಈ ಮೊದಲೇ ಕ್ಯಾಬ್ ನಲ್ಲಿ ಇದ್ದ ಇಬ್ಬರು ಯುವಕರು ಸೇರಿದಂತೆ ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯುವತಿಗೆ ಗೊತ್ತಾಗದಂತೆ ಬೇರೆ ಮಾರ್ಗದಲ್ಲಿ ಕರೆದುಕೊಂಡು ಹೋದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ ಚಾಕು ತೋರಿಸಿ ಆಕೆಯನ್ನು ಬೆದರಿಸಿದ್ದು, ಹಣ ಹಾಗೂ ಚಿನ್ನಾಭರಣ ಕಸಿದುಕೊಂಡಿದ್ದಾರೆ.

ಬೆಳಗಿನ 4.30 ರ ಸುಮಾರಿಗೆ ದೊಡ್ಡಬಳ್ಳಾಪುರ ಸಮೀಪದ ಆಲಹಳ್ಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬೆತ್ತಲೆ ಮಾಡಿ ಕಾರ್ ನಿಂದ ಹೊರಗೆ ಹಾಕಿ ಪರಾರಿಯಾಗಿದ್ದಾರೆ. ಯುವತಿ ಸಮೀಪದ ಮನೆ ಬಳಿ ಹೋಗಿ ಸಹಾಯಕ್ಕೆ ಕಿರುಚಾಡಿದ್ದು ಹೊರಗೆ ಬಂದ ಮನೆಯವರು ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಹೇಳಿಕೆ ಪಡೆದುಕೊಂಡಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos